ಬೌದ್ಧಿಕ ಅಸಾಮರ್ಥ್ಯರಿಗೆ ಮಾತ್ರ ನಿಯಮಗಳಲ್ಲಿ ಸಡಿಲಿಕೆ ನೀಡಲಾಗಿದೆ.

ನವದೆಹಲಿ(ಜ.26): ಸಿನೆಮಾ ಮಂದಿರಗಳಲ್ಲಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ಹಾಡುವ ವೇಳೆ ಎದ್ದುನಿಲ್ಲಲು ಸಾಧ್ಯವಾಗದ ದಿವ್ಯಾಂಗರು ಗರಿಷ್ಠ ಮಟ್ಟದಲ್ಲಿ ಸೌಜನ್ಯ ತೋರಬೇಕು, ಕಿವುಡರು ಹಾಗೂ ಅಂಧರು ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ಸರ್ಕಾರ ತನ್ನ ಪ್ರಕಟಣೆ ತಿಳಿಸಿದೆ.

ರಾಷ್ಟ್ರಗೀತೆಗೆ ದಿವ್ಯಾಂಗರು ಗೌರವ ಸಲ್ಲಿಸುವ ಕುರಿತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ರೂಪಿಸಿರುವ ಹೊಸ ನಿಯಮಗಳನ್ನು ಗಣರಾಜ್ಯೋತ್ಸವ ದಿನದಂದು ಬಿಡುಗಡೆಗೊಳಿಸಲಾಯಿತು. ಬೌದ್ಧಿಕ ಅಸಾಮರ್ಥ್ಯರಿಗೆ ಮಾತ್ರ ನಿಯಮಗಳಲ್ಲಿ ಸಡಿಲಿಕೆ ನೀಡಲಾಗಿದೆ.

ಕಳೆದ ವರ್ಷ ನವೆಂಬರ್‌'ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ ಸಿನಿಮಾ ಆರಂಭವಾಗುವ ಮುನ್ನ ರಾಷ್ಟ್ರಗೀತೆಯನ್ನು ಹಾಕಬೇಕು, ಆ ಸಂದರ್ಭದಲ್ಲಿ ಎಲ್ಲರೂ ಎದ್ದುನಿಂತು ಗೌರವ ನೀಡಬೇಕು ಎಂದಿತ್ತು. ದಿವ್ಯಾಂಗರು ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲುವಂತಿಲ್ಲ ಎನ್ನುವ ತೀರ್ಪನ್ನು ಬದಲಾಯಿಸಿ ಕೋರ್ಟ್ ಡಿಸೆಂಬರ್‌'ನಲ್ಲಿ ಹೊಸ ಆದೇಶವನ್ನು ಹೊರಡಿಸಿತ್ತು, ಅದರಂತೆ ಕೇಂದ್ರ ಸರ್ಕಾರ ನಿಯಮಗಳನ್ನು ರೂಪಿಸಿ ಗಣರಾಜ್ಯೋತ್ಸವದಂದೇ ಪ್ರಕಟಿಸಿದೆ.