ಜುನೋ ಮಿಷನ್ ಅವಧಿ ವಿಸ್ತರಿಸಿದ ನಾಸಾಗುರುಗ್ರಹದ ಅಧ್ಯಯನದಲ್ಲಿ ನಿರತವಾದ ಜುನೋ ನೌಕೆ2022ರವರೆಗೆ ಅವಧಿ ವಿಸ್ತರಿಸಲು ನಾಸಾ ಅಸ್ತುದೈತ್ಯ ಗ್ರಹದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸಹಕಾರಿ

ವಾಷಿಂಗ್ಟನ್[ಜೂ.7): ಖಗೋಳಪ್ರೀಯರಿಗೆ ಸಂತಸದ ಸುದ್ದಿಯೊಂದನ್ನು ನಾಸಾ ನೀಡಿದೆ. ನಮ್ಮ ಸೌರಮಂಡಲದ ಅತ್ಯಂತ ದೊಡ್ಡ ಗ್ರಹವಾದ ಗುರುವಿನ ಅಧ್ಯಯನದಲ್ಲಿ ನಿರತವಾದ ಜುನೋ ಮಿಷನ್‌ನ್ನು ಮೂರು ವರ್ಷಗಳವರೆಗೆ ನಾಸಾ ವಿಸ್ತರಿಸಿದೆ.

Add Asianetnews Kannada as a Preferred SourcegooglePreferred

2011 ರಲ್ಲಿ ನಾಸಾದಿಂದ ಉಡಾಯಿಸಲಪಟ್ಟ ಜುನೋ ನೌಕೆ, 2016ರಲ್ಲಿ ಗುರುಗ್ರಹದ ಕಕ್ಷೆಯನ್ನು ತಲುಪಿತ್ತು. ಅಂದಿನಿಂದ ನಿರಂತರವಾಗಿ ಗುರುಗ್ರಹದ ಕುರಿತು ಮಹತ್ವದ ಮಾಹಿತಿಗಳನ್ನು ಜುನೋ ರವಾನಿಸುತ್ತಲೇ ಇದೆ.
ನಾಸಾದ ಈ ಮೊದಲಿನ ಯೋಜನೆಯಂತೆ ಜುನೋ ಈ ವರ್ಷದ ಫೆಬ್ರುವರಿಯಲ್ಲೇ ತನ್ನ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಬೇಕಿತ್ತು. ಆದರೆ ಗುರುಗ್ರಹದ ಕುರಿತು ಮತ್ತಷ್ಟು ಮಾಹಿತಿಯ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಜುನೋ ಮಿಷನ್‌ನನ್ನು ವಿಸ್ತರಿಸಲು ನಾಸಾ ನಿರ್ಧರಿಸಿದೆ.

Scroll to load tweet…

ಪ್ರತಿ 14 ದಿನಗಳಿಗೊಮ್ಮೆ ಗುರುಗ್ರಹವನ್ನು ಸುತ್ತು ಹೊಡೆಯುತ್ತಿರುವ ಜುನೋ, ಆ ದೈತ್ಯ ಗ್ರಹದ ಕುರಿತಾದ ಮಾನವನ ತಿಳುವಳಿಕೆಯನ್ನು ಅಗಾಧವಾಗಿ ಹೆಚ್ಚಿಸಿದೆ. ಇದೀಗ ಜುನೋ ಮಿಷನ್ ಅವಧಿಯನ್ನು 2022 ರವರೆಗೆ ವಿಸ್ತರಿಸುವುದರಿಂದ ಖಗೋಳಪ್ರೀಯರ ಖುಷಿ ಎಲ್ಲೆ ಮೀರಿದೆ.