ಭಾನುವಾರ ಈ ಎಸ್‌ಪಿಜಿ ಪಡೆ ಸಿಬ್ಬಂದಿ ಲಖನೌದಲ್ಲಿ ಕರೆಂಟ್ ವೈರ್‌ನಿಂದ ಇಬ್ಬರನ್ನೂ ರಕ್ಷಿಸುವ ಕೆಲಸ ಮಾಡಿತು.

ಲಖನೌ(ಜ.30): ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿ ಸಿಎಂ ಅಖಿಲೇಶ್‌ಸಿಂಗ್ ಯಾದವ್‌ಗೆ ಸದಾ ಬೆಂಗಾವಲು ಪಡೆ ಇದ್ದೇ ಇರುತ್ತದೆ. ಯಾವುದೇ ಸಂಭವನೀಯ ದಾಳಿಯನ್ನು ತಡೆಯಲು ಅವರ ಸುತ್ತಮುತ್ತಲೂ ಸದಾ ಎಸ್‌ಪಿಜಿ ಪಡೆ ಇರುತ್ತದೆ.

ಆದರೆ ಭಾನುವಾರ ಈ ಎಸ್‌ಪಿಜಿ ಪಡೆ ಸಿಬ್ಬಂದಿ ಲಖನೌದಲ್ಲಿ ಕರೆಂಟ್ ವೈರ್‌ನಿಂದ ಇಬ್ಬರನ್ನೂ ರಕ್ಷಿಸುವ ಕೆಲಸ ಮಾಡಿತು.

ಭಾನುವಾರ ನಡೆದ ರೋಡ್ ಶೋ ವೇಳೆ ಉಭಯ ನಾಯಕರು ದೊಡ್ಡ ವಾಹನದ ಮೇಲೇರಿ ನಿಂತಿದ್ದರು. ಈ ವೇಳೆ ರಸ್ತೆಯಲ್ಲಿ ಎಲ್ಲೆಂದರಲ್ಲಿ ತೂಗುಬಿದ್ದಿದ ವಿದ್ಯುತ್ ವೈರ್‌'ಗಳನ್ನು ಮರದ ತುಂಡಿನಿಂದ ಎತ್ತಿಹಿಡಿಯುವ ಮೂಲಕ ಭದ್ರತಾ ಸಿಬ್ಬಂದಿ ಉಭಯ ನಾಯಕರಿಗೆ ರಕ್ಷಣೆ ನೀಡಿದರು.