ಬೆಂಗಳೂರು (ಸೆ.30): ಕಾವೇರಿ ವಿಚಾರದಲ್ಲಿ ಕರ್ನಾಟಕದ ಪರ ಫಾಲಿ ಎಸ್. ನಾರಿಮನ್​ ವಾದ ಮುಂದುವರೆಸಲಿದ್ದಾರೆ.

ನಾರಿಮನ್ ಅವರನ್ನು ಭೇಟಿಯಾದ ಬಳಿಕ ಸಚಿವ ಟಿ.ಬಿ.ಜಯಚಂದ್ರ ಈ ಹೇಳಿಕೆ ನೀಡಿದ್ದಾರೆ.

ಕರ್ನಾಟಕಕ್ಕೆ ನಾರಿಮನ್​ ಕೆಲವು ಸಲಹೆಗಳನ್ನು ನೀಡಿದ್ದಾರೆ,

ನಾರಿಮನ್​ ಸಲಹೆ ಬಗ್ಗೆ ನಾಳಿನ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಜಯಚಂದ್ರ ಹೇಳಿದ್ದಾರೆ.

 ಸರ್ವಪಕ್ಷ ಸಭೆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಇಂದು ಸುಪ್ರೀಂ ಕೋರ್ಟ್ ವಿಚಾರಣೆಯ ವೇಳೆ, ತಾನು ವಾದ ಮಂಡನೆ ಮಾಡುವುದಿಲ್ಲವೆಂದು ಹೇಳಿ ನಾರಿಮನ್ ಹಿಂದೆ ಸರಿದಿದ್ದರು.