ಉತ್ತರಾಖಂಡ್‌ನ ಭಾರತ-ಚೀನಾ ಗಡಿಯಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ ಇಂಡೋ-ಟಿಬೆಟ್ ಬಾರ್ಡರ್‌ಪೊಲೀಸರ ಜೊತೆ ಪ್ರಧಾನಿ ಬೆಳಕಿನ ಹಬ್ಬವನ್ನು ಆಚರಿಸಲಿದ್ದಾರೆ. 

ಉತ್ತರ್ ಖಂಡ್(ಅ.29): ಪ್ರಧಾನಿ ನರೇಂದ್ರ ಮೋದಿ ಈ ಬಾರಿ ದೀಪಾವಳಿಯನ್ನು ಭಾರತ-ಚೀನಾ ಗಡಿಯಲ್ಲಿ ಯೋಧರೊಂದಿಗೆ ಆಚರಿಸಲಿದ್ದಾರೆ. 

ಉತ್ತರಾಖಂಡ್‌ನ ಭಾರತ-ಚೀನಾ ಗಡಿಯಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ ಇಂಡೋ-ಟಿಬೆಟ್ ಬಾರ್ಡರ್‌ಪೊಲೀಸರ ಜೊತೆ ಪ್ರಧಾನಿ ಬೆಳಕಿನ ಹಬ್ಬವನ್ನು ಆಚರಿಸಲಿದ್ದಾರೆ. 

ಇಂದು ದೆಹಲಿಯಿಂದ ಉತ್ತರ್ ಖಂಡ್ ನ ಚಮೇಲಿಯಲ್ಲಿರುವ ಬದ್ರಿನಾಥಕ್ಕೆ ತೆರಳಲಿರುವ ಮೋದಿ ಬದ್ರಿನಾಥನ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. 

ಆ ಬಳಿಕ ಮನಾಗೆ ತೆರಳಿ ಐಟಿಬಿಪಿ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ. ಪ್ರಧಾನಿ ಮೋದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಾಥ್ ನೀಡಲಿದ್ದಾರೆ. 

ಪ್ರಧಾನಿ ಮೋದಿ The #Sandesh2Soldiers ಎಂಬ ಹೆಸರಿನಲ್ಲಿ ಆಂದೋಲನ ಆರಂಭಿಸಿದ್ದು, ಹಬ್ಬದ ಸಮಯದಲ್ಲೂ ತಮ್ಮವರನ್ನೆಲ್ಲಾ ಬಿಟ್ಟು ಗಡಿಯಲ್ಲಿ ದೇಶ ಕಾಯುವ ಯೋಧರಿಗೆ ಹಬ್ಬದ ಶುಭಾಶಯ ತಿಳಿಸಲು ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ.