Asianet Suvarna News Asianet Suvarna News

ಗೋ ರಕ್ಷಣೆ ಹೆಸರಲ್ಲಿ ಜನರನ್ನು ಹತ್ಯೆ ಮಾಡುವುದನ್ನು ಒಪ್ಪಲಾಗುವುದಿಲ್ಲ; ಗೋ ರಕ್ಷಕರಿಗೆ ಮೋದಿ ಖಡಕ್ ಸಂದೇಶ

ಗೋ ರಕ್ಷಣೆ ಮಾಡುವ ಹೆಸರಲ್ಲಿ ಜನರನ್ನು ಕೊಲ್ಲುವುದನ್ನು ಒಪ್ಪಲಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗೋ ರಕ್ಷಕರಿಗೆ ಖಡಕ್ ಸಂದೇಶ ನೀಡಿದ್ದಾರೆ.

Narendra Modi warns cow vigilantes Killing in the name of gau bhakti is unacceptable
  • Facebook
  • Twitter
  • Whatsapp

ನವದೆಹಲಿ (ಜೂ.29): ಗೋ ರಕ್ಷಣೆ ಮಾಡುವ ಹೆಸರಲ್ಲಿ ಜನರನ್ನು ಕೊಲ್ಲುವುದನ್ನು ಒಪ್ಪಲಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗೋ ರಕ್ಷಕರಿಗೆ ಖಡಕ್ ಸಂದೇಶ ನೀಡಿದ್ದಾರೆ.

ಅಹ್ಮದಾಬಾದ್’ನ ಸಾಬರಮತಿ ಆಶ್ರಮದ ಶತಮಾನೋತ್ಸವ ಸಂದರ್ಭದಲ್ಲಿ ಮಾತನಾಡುತ್ತಾ, ಗೋವಿನ  ಹೆಸರಿನಲ್ಲಿ ಜನರನ್ನು ಹತ್ಯೆ ಮಾಡುವುದು ಒಪ್ಪತಕ್ಕ ಮಾತಲ್ಲ. ಇದನ್ನು ನಾನು ಖಂಡಿಸುತ್ತೇನೆ. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅಧಿಕಾರವಿಲ್ಲ.  ನಾವು ಅಹಿಂಸೆಯ ನೆಲದಲ್ಲಿದ್ದೇವೆ. ಹಿಂಸೆಯೇ ಎಲ್ಲ ಸಮಸ್ಯೆಗೂ ಉತ್ತರವಲ್ಲ. ಮಹಾತ್ಮ ಗಾಂಧಿಜಿಯವರು ಇದನ್ನು ಒಪ್ಪುತ್ತಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  

ವಿನೋಬಾ ಭಾವೆ ಮತ್ತು ಮಹಾತ್ಮ ಗಾಂಧೀಜಿ ಗೋ ಭಕ್ತಿಯ ಬಗ್ಗೆ ದಾರಿ ತೋರಿಸಿಕೊಟ್ಟಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.

ಹೋ ಹತ್ಯೆ ಮಾಡಿದ್ದಾರೆನ್ನುವ ಆರೋಪದಲ್ಲಿ ಸ್ವಯಂ ಘೋಷಿತ ಗೋ ರಕ್ಷಕರು ಅಂತವರನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆ ಇತ್ತೀಚಿಗೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮೋದಿಯವರು ಈ ಮಾತನ್ನು ಹೇಳಿದ್ದಾರೆ.

Follow Us:
Download App:
  • android
  • ios