ವಾಷಿಂಗ್ಟನ್‌[ಫೆ.08]: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರು ಪ್ರಯಾಣಿಸುವ ‘ಏರ್‌ ಇಂಡಿಯಾ ಒನ್‌’ ವಿಮಾನದ ಭದ್ರತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಅಮೆರಿಕದಿಂದ ಎರಡು ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಖರೀದಿಗೆ ನಿರ್ಧರಿಸಿದ್ದು, ಅವನ್ನು ಪೂರೈಸಲು ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದಾಗಿ ಇನ್ನು ಮುಂದೆ ಮೋದಿ ಅವರು ಪ್ರಯಾಣಿಸುವ ವಿಮಾನಕ್ಕೆ ಕ್ಷಿಪಣಿ ದಾಳಿ ನಡೆಸಿದರೂ ಏನೂ ಆಗುವುದಿಲ್ಲ.

ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳು ಪ್ರಯಾಣಿಸುವ ‘ಏರ್‌ ಇಂಡಿಯಾ ಒನ್‌’ ವಿಮಾನಗಳಿಗೆ ಈ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಕೆ ಮಾಡಲಾಗುತ್ತದೆ. ಹೆಚ್ಚೂ ಕಡಿಮೆ ಅಮೆರಿಕ ಅಧ್ಯಕ್ಷರು ಪ್ರಯಾಣಿಸುವ, ವಿಶ್ವದಲ್ಲೇ ಅತ್ಯಧಿಕ ಭದ್ರತೆ ಹೊಂದಿರುವ ಏರ್‌ಫೋರ್ಸ್‌- 1 ರೀತಿಯಲ್ಲೇ ಈ ಭದ್ರತೆಯೂ ಇರುತ್ತದೆ. ಈ ಕ್ಷಿಪಣಿ ನಿರೋಧಕ ವ್ಯವಸ್ಥೆಗಳಿಗೆ 1300 ಕೋಟಿ ರು. ವೆಚ್ಚವಾಗುತ್ತದೆ.

ಶತ್ರುಗಳು ಮೋದಿ ಅಥವಾ ರಾಷ್ಟ್ರಪತಿ ಪ್ರಯಾಣಿಸುವ ವಿಮಾನದತ್ತ ಕ್ಷಿಪಣಿ ದಾಳಿ ನಡೆಸಿದರೆ, ಅದನ್ನು ಪತ್ತೆ ಹಚ್ಚಿ ಹೊಡೆದುರುಳಿಸುವ ಸಾಮರ್ಥ್ಯ ಅಮೆರಿಕ ಪೂರೈಸಲು ಒಪ್ಪಿರುವ ‘ಲಾಜ್‌ರ್‍ ಏರ್‌ಕ್ರಾಫ್ಟ್‌ ಇನ್‌ಫ್ರಾರೆಡ್‌ ಕೌಂಟರ್‌ ಮೆಸ​ರ್‍ಸ್’ ಹಾಗೂ ‘ಸೆಲ್‌್ಫ ಪ್ರೊಟೆಕ್ಷನ್‌ ಸೂಟ್ಸ್‌’ಗೆ ಇರುತ್ತದೆ.