ಬೆಳಗಾವಿಯ ಕೆ.ಎಲ್.ಇ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ.ಕಾಳ ಧನಿಕರ ವಿರುದ್ಧ ಗುಡುಗಿದರು. ಕಪ್ಪು ಹಣ್ಣದ ವಿರುದ್ದ ಹೋರಾಟ ಮಾಡುವುದು ನನ್ನ ಕರ್ತವ್ಯ. ನಾನು ಕಷ್ಟಗಳನ್ನು ಹತ್ತಿರದಿಂದ ನೋಡಿದ್ದೇನೆ- ಜನರ ಕಷ್ಟ ನನಗೆ ಅರ್ಥವಾಗುತ್ತದೆ, ಇದು ಕೇವಲ 50 ದಿನಗಳ ಕಷ್ಟ. ಒಮ್ಮೆ ಸ್ವಚ್ಚತಾ ಕಾರ್ಯ ಪೂರ್ಣವಾದರೆ ಸೊಳ್ಳೆಗಳೂ ಹತ್ತಿರ ಸುಳಿಯುವುದಿಲ್ಲ. 2ಜಿ ಕಲ್ಲಿದಲು ಹಗರಣದಲ್ಲಿ ಕೋಟಿ ಕೋಟಿ ನುಂಗಿದ್ದವರು ಈಗ 4 ಸಾವಿರ ರೂಪಾಯಿಗಾಗಿ ಬ್ಯಾಂಕಿಗೆ ಬಂದು ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಸ್ವಾರ್ಥಿಗಳು ಮಾತ್ರ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಹತ್ತಾರು ವರ್ಷಗಳ ಕಾಲ ತಿಜೂರಿಯಲ್ಲಿಟ್ಟಿದ್ದ ಹಣವನ್ನು ಈಗ ಭಿಕ್ಷುಕ ಸಹ ಮುಟ್ಟುತ್ತಿಲ್ಲ ಎಂದು ಮೋದಿ ಹೇಳಿದ್ದಾರೆ.
ಬೆಳಗಾವಿ(ನ.13): ಜನ ನನ್ನ ಮೇಲೆ ನಿರೀಕ್ಷೆ ಇಟ್ಟು ಓಟು ಮಾಡಿದ್ದಾರೆ. ನಾನು ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡುತ್ತೇನೆ ಎಂಬ ನಂಬಿಕೆಯಿಂದ ನನಗೆ 2014ರ ಚುನಾವಣಿಯಲ್ಲಿ ಓಟು ಹಾಕಿದ್ದಾರೆ. ನವೆಂಬರ್ 8ರಂದು ಕೆಲವು ಜನ ಶಾಂತವಾಗಿ ಮಲಗಿದ್ದಾರೆ. ಇನ್ನೂ ಕೇಲವರು ನಿದ್ದೆ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬೆಳಗಾವಿಯ ಕೆ.ಎಲ್.ಇ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ.ಕಾಳ ಧನಿಕರ ವಿರುದ್ಧ ಗುಡುಗಿದರು. ಕಪ್ಪು ಹಣ್ಣದ ವಿರುದ್ದ ಹೋರಾಟ ಮಾಡುವುದು ನನ್ನ ಕರ್ತವ್ಯ. ನಾನು ಕಷ್ಟಗಳನ್ನು ಹತ್ತಿರದಿಂದ ನೋಡಿದ್ದೇನೆ- ಜನರ ಕಷ್ಟ ನನಗೆ ಅರ್ಥವಾಗುತ್ತದೆ, ಇದು ಕೇವಲ 50 ದಿನಗಳ ಕಷ್ಟ. ಒಮ್ಮೆ ಸ್ವಚ್ಚತಾ ಕಾರ್ಯ ಪೂರ್ಣವಾದರೆ ಸೊಳ್ಳೆಗಳೂ ಹತ್ತಿರ ಸುಳಿಯುವುದಿಲ್ಲ. 2ಜಿ ಕಲ್ಲಿದಲು ಹಗರಣದಲ್ಲಿ ಕೋಟಿ ಕೋಟಿ ನುಂಗಿದ್ದವರು ಈಗ 4 ಸಾವಿರ ರೂಪಾಯಿಗಾಗಿ ಬ್ಯಾಂಕಿಗೆ ಬಂದು ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಸ್ವಾರ್ಥಿಗಳು ಮಾತ್ರ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಹತ್ತಾರು ವರ್ಷಗಳ ಕಾಲ ತಿಜೂರಿಯಲ್ಲಿಟ್ಟಿದ್ದ ಹಣವನ್ನು ಈಗ ಭಿಕ್ಷುಕ ಸಹ ಮುಟ್ಟುತ್ತಿಲ್ಲ ಎಂದು ಮೋದಿ ಹೇಳಿದ್ದಾರೆ.
`ಯಾರಾದರು ಕಪ್ಪು ಹಣ್ಣ ಇಟ್ಟುಕೊಂಡರು ಒಂದು ವಿಷಯ ಅರ್ಥಮಾಡಿಕೊಳ್ಳಿ , ಸ್ವಾತಂತ್ರದ ನಂತರದ ಎಲ್ಲ ಕಳ್ಳ ಲೆಕ್ಕವನ್ನು ಹೊರಗೆ ಎಳೆದು ಬೀಡುತ್ತೇನೆ. ಈ ಕಲಸಕ್ಕೆ ಒಂದು ಲಕ್ಷ ಜನ ಜನರನ್ನು ಹೊಸದಾಗಿ ನೇಮಿಸಿಕೊಳ್ಳಲು ಸಿದ್ಧ. ಇದು ಎಂಥಾ ಅಪಾಯಕಾರಿ ಕೆಲಸ ಎಂಬುದು ನನಗೆ ಗೊತ್ತು. ನಾನು ಎಂಥವರನ್ನು ಎದುರು ಹಾಕಿಕೊಂಡಿದ್ದೇನೆ ಎಂಬೂದು ನನಗೆ ಗೊತ್ತು ಎಂದು ನರೇಂದ್ರಮೋದಿ ಗುಡುಗಿದ್ಧಾರೆ.
ನನ್ನ ನಿರ್ಧಾರ ಸರೀನಾ ತಪ್ಪಾ ಅಂತ ಡಿಸೆಂಬರ್ 30ರವರೆಗೂ ಕಾಯಿರಿ: ಬೆಳಗಾವಿಯ ನನ್ನ ಪ್ರೀತಿಯ ಬಂಧು, ಭಗಿನಿಯರೇ ಎಂದು ಭಾಷಣ ಆರಂಭಿಸಿದ ಮೋದಿ, ಉತ್ತಮ ಶಿಕ್ಷಕರು ಹಲವರು ಇರುತ್ತಾರೆ, ಆದರೆ ಅಮರ ಶಿಕ್ಷಕರು ಬೇಕು. ಸಪ್ತಋಷಿಗಳ ಶ್ರಮ ನೂರಾರು ವರ್ಷ ಕಳೆದರೂ ಫಲ ಕೊಡುತ್ತಿದೆ. ಕೆಎಲ್ಇ ವಿದ್ಯಾರ್ಥಿ ಅನ್ನುವುದು ಹೆಮ್ಮೆಯ ವಿಷಯ ಎಂದರು. ಸ್ವಾತಂತ್ರ್ಯ ವೇಳೆ ಗಾಂಧಿಜಿ, ಲೋಕಮಾನ್ಯ ತಿಲಕ್ ಶಿಕ್ಷಣಕ್ಕೆ ಒತ್ತು ನೀಡಿದ್ದರು. ವಿಶ್ವದ 100 ಪ್ರಖ್ಯಾತ ವಿವಿಗಳಲ್ಲಿ ನಮ್ಮ ವಿವಿಗಳ ಹೆಸರು ಇರಬೇಕು ಎಂದರು.
ಇದೇವೇಳೆ, ಕಾಂಗ್ರೆಸ್`ನವರು ಯಾಕೆ ನೋಟು ಬ್ಯಾನ್ ಮಾಡಿದ್ರಿ ಅಂತ ಕೇಳುತ್ತಿದ್ದಾರೆ. ನನ್ನ ನಿರ್ಧಾರ ಸರೀನಾ ತಪ್ಪಾ..? ಅಂತಾ ಡಿಸೆಂಬರ್ 30ರವರೆಗೂ ಕಾಯಿರಿ. ಡಿಸೆಂಬರ್ 30ರವರೆಗೆ ಹಣದ ತೊಂದರೆಯಾಗುತ್ತೆ, ನಂತರ ಸುಲಭವಾಗುತ್ತೆ. ಈ ಹಿಂದೆ ಆಳಿದವರು ದೇಶವನ್ನು ಲೂಟಿ ಮಾಡಿದ್ದಾರಾ ಇಲ್ಲವಾ? ದೇಶದಲ್ಲಿ ಬಡವರು ನೆಮ್ಮದಿಯಿಂದ ಮಲಗುತ್ತಿದ್ದಾರೆ. ಹೊಸ ನೋಟಿನ ಗೌಪ್ಯತೆ ಕಾಪಾಡುವುದು ನಮಗೆ ಅನಿವಾರ್ಯವಾಗಿತ್ತು. ಸದ್ಯ, ದೇಶದಲ್ಲಿ ಶ್ರೀಮಂತರ ನಿದ್ದೆ ಹಾಳಾಗಿದೆ, ನಮ್ಮ ಸರ್ಕಾರ ಕೇವಲ ಪ್ರಾಮಾಣಿಕರ ರಕ್ಷಣೆಯಲ್ಲಿ ತೊಡಗಿದೆ ಎಂದರು.