ನವದೆಹಲಿ[ಆ.18]: ರಫೇಲ್ ಡೀಲ್'ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚೌಕಿದಾರ್ ಅಲ್ಲ ಪಾಲುದಾರರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಫೆಲ್ ಡೀಲ್ ನಲ್ಲಿ ಪ್ರಧಾನ ಮಂತ್ರಿ ಪಾತ್ರ ಇದೆ. 40 ಸಾವಿರ ಕೋಟಿ ರೂ. ನಷ್ಟವಾಗಿದೆ. 30 ಸಾವಿರ ಕೋಟಿ ರೂ. ಅನಿಲ್‌ ಅಂಬಾನಿ ಕಂಪನಿಗೆ ನೀಡಲಾಗಿದೆ. ರಾಜ್ಯದ ಹೆಚ್ಎಎಲ್ ಗೆ ಸಿಗಬೇಕಿದ್ದ ಕೆಲಸದ ಆದೇಶ  ಕೈತಪ್ಪಿ ಅಂಬಾನಿ ಕಂಪನಿ ಪಾಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಫೇಲ್ ಡೀಲ್'ನಲ್ಲಿ ಸಾಕಷ್ಟು ಭ್ರಷ್ಟಚಾರ ನಡೆದಿದೆ. ರಫೆಲ್ ಡೀಲ್ ತನಿಖೆ ನಡೆಸಬೇಕು. ಭ್ರಷ್ಟಾಚಾರ ಖರೀದಿಯಲ್ಲಿ ಸಾಕಷ್ಟು ಲೋಪ‌ದೋಷಗಳಿವೆ. ಪ್ರಧಾನಿ ಮೋದಿ ಅವರು ಯಾರಿಗೂ ಗೊತ್ತಿಲ್ಲದೇ ಫ್ರಾನ್ಸ್ ನಲ್ಲಿ ಖರೀದಿಸಿಕೊಂಡು ಬಂದಿದ್ದಾರೆ. ಈ ಕಾರಣಕ್ಕಾಗಿ ಮೂವರು ರಕ್ಷಣಾ ಸಚಿವರನ್ನು ಬದಲಾಯಿಸಲಾಗಿದೆ. ಸದ್ಯ ತನ್ನ ಮಾತು ಕೇಳುವ ಒಬ್ಬರನ್ನು ರಕ್ಷಣಾ ಸಚಿವರಾಗಿ ನೇಮಿಸಿಕೊಂಡಿದ್ದು, ಡೀಲ್'ನಲ್ಲಿ ಪ್ರಧಾನಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.