Asianet Suvarna News Asianet Suvarna News

‘ರಾಜ್ಯ ರಾಜಕೀಯ ಡ್ರಾಮಾ ಹಿಂದೆ ಶಾ, ಮೋದಿ’

ಕರ್ನಾಟಕ ರಾಜಕೀಯ ಪ್ರಹಸನದ ಹಿಂದೆ ಇರುವವರೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಿತ್ ಶಾ, ಬಿಜೆಪಿಯವರೆಲ್ಲಾ ಸೇರಿ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಹೀಗೆಂದು ಕೈ ಮುಖಂಡರೋರ್ವರು ವಾಕ್ ಪ್ರಹಾರ ನಡೆಸಿದ್ದಾರೆ. 

Narendra Modi Amit Shah Behind Karnataka Political Crisis
Author
Bengaluru, First Published Jul 11, 2019, 3:18 PM IST
  • Facebook
  • Twitter
  • Whatsapp

ಗದಗ [ಜು.11] :  ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಎಲ್ಲಾ ಬೆಳವಣಿಗೆಗಳಿಗೆ  ಅಮಿತ್ ಶಾ ಹಾಗೂ ನರೇಂದ್ರ ಮೋದಿ ಅವರೇ ಕಾರಣ. ಅವರಿಬ್ಬರ ಕುದುರೆ ವ್ಯಾಪಾರವೇ ಇದಕ್ಕೆಲ್ಲಾ ಕಾರಣ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ್ ಹೇಳಿದ್ದಾರೆ. 

ಗದಗದಲ್ಲಿ ಮಾತನಾಡಿದ ಎಚ್.ಕೆ ಪಾಟೀಲ್, ಬಿಜೆಪಿಯವರು ನಡೆಸುತ್ತಿರುವ ಕುದುರೆ ವ್ಯಾಪಾರದಲ್ಲಿ ಅವರು ಯಶಸ್ವಿಯಾಗಲ್ಲ.  ನಮ್ಮ ಪಕ್ಷದ ಶಾಸಕ ಸುಧಾಕರ್ ಅವರನ್ನು ಕರೆದುಕೊಂಡು ಹೋಗಲು ಬಂದಿರುವುದನ್ನು ನೋಡಿದ್ದೇವೆ. ನಮ್ಮ ಶಾಸಕರ ರಕ್ಷಣೆಗೆ ಇವರ್ಯಾರು ಎಂದು ಪ್ರಶ್ನೆ ಮಾಡಿದ್ದಾರೆ. 

ಬಿಜೆಪಿಯವರು ಎಲ್ಲಿ ಹೇಗೆ ವರ್ತಿಸಬೇಕು ಎನ್ನುವುದನ್ನು ಮೊದಲು ಕಲಿಯಲಿ. ಬಿಜೆಪಿ ಇಂತಹ ಕೃತ್ಯದಲ್ಲಿ ವಿಫಲರಾದಾಗ ಮಾತ್ರವೇ ಪ್ರಜಾಪ್ರಭುತ್ವಕ್ಕೆ ಉಳಿಗಾಲ  ಎಂದು ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇನ್ನು ರಾಜೀನಾಮೆ ನೀಡಿ ಮುಂಬೈ ಸೇರಿರುವ ಅತೃಪ್ತರು ವಾಪಸ್ ಬಂದರೆ ಸರ್ಕಾರ ಉಳಿಯುತ್ತದೆ. ಇನ್ನು ಅತೃಪ್ತ ಶಾಸಕರ ನಡೆಯನ್ನು ಜನ ನೋಡುತ್ತಿದ್ದಾರೆ ಎಂದಿರುವ ಅವರು ಜನರು ಮುಗ್ದರಿರಬಹುದು ಆದರೆ ದಡ್ಡರಲ್ಲ. ರಾಜಕೀಯ ಬೆಳವಣಿಗೆಗಳು ಅವರಿಗೆ ಅಸಮಾಧಾನ ಉಂಟು ಮಾಡಲಿದೆ ಎನ್ನುವಂತೆ ಹೇಳಿಕೆ ನೀಡಿದ್ದಾರೆ. 

Follow Us:
Download App:
  • android
  • ios