ತಮ್ಮ ಸಂಪತ್ತಿನ ಅರ್ಧದಷ್ಟು ಸಂಪತ್ತನ್ನು ಸಮಾಜ ಸೇವೆಗೆ ಮುಡಿಪಿಡಲು ನಿಲೇಕಣಿ ನಿರ್ಧಾರ

First Published 1, Jun 2018, 11:50 AM IST
Nandan Nilekani Decides to Donate his half of Property for Social Service
Highlights

ಬೆಂಗಳೂರು ಮೂಲದ ವಿಖ್ಯಾತ ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ನಂದನ್ ನಿಲೇಕಣಿ, ಅರಬ್ ಸಂಯುಕ್ತ  ಸಂಸ್ಥಾನ (ಯುಎಇ)ದಲ್ಲಿ ಉದ್ಯಮಿಯಾಗಿರುವ ಉಡುಪಿ ಜಿಲ್ಲೆ ಕಾಪು ಮೂಲದ ಬಿ.ಆರ್. ಶೆಟ್ಟಿ ಹಾಗೂ ಇನ್ನಿತರೆ ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳು ತಮ್ಮ  ಸಂಪತ್ತಿನ ಅರ್ಧದಷ್ಟು ಮೊತ್ತವನ್ನು ಸಮಾಜಸೇವೆಗೆ ಮುಡಿಪಾಗಿಡಲು ನಿರ್ಧರಿಸಿದ್ದಾರೆ.

ನ್ಯೂಯಾರ್ಕ್ (ಜೂ. 01): ಬೆಂಗಳೂರು ಮೂಲದ ವಿಖ್ಯಾತ ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ನಂದನ್ ನಿಲೇಕಣಿ, ಅರಬ್ ಸಂಯುಕ್ತ  ಸಂಸ್ಥಾನ (ಯುಎಇ)ದಲ್ಲಿ ಉದ್ಯಮಿಯಾಗಿರುವ ಉಡುಪಿ ಜಿಲ್ಲೆ ಕಾಪು ಮೂಲದ ಬಿ.ಆರ್. ಶೆಟ್ಟಿ ಹಾಗೂ ಇನ್ನಿತರೆ ಇಬ್ಬರು ಭಾರತೀಯ ಮೂಲದ ವ್ಯಕ್ತಿಗಳು ತಮ್ಮ ಸಂಪತ್ತಿನ ಅರ್ಧದಷ್ಟು ಮೊತ್ತವನ್ನು ಸಮಾಜಸೇವೆಗೆ ಮುಡಿಪಾಗಿಡಲು ನಿರ್ಧರಿಸಿದ್ದಾರೆ.

ನಂದನ್ ನಿಲೇಕಣಿ ಹಾಗೂ ಅವರ ಪತ್ನಿ ರೋಹಿಣಿ ನಿಲೇಕಣಿ ಅವರು 11,500 ಕೋಟಿ ರು. ಆಸ್ತಿ ಹೊಂದಿದ್ದು, ಆ ಪೈಕಿ ಅರ್ಧದಷ್ಟನ್ನು ದಾನ ಮಾಡುವುದಾಗಿ ಕಳೆದ ವರ್ಷವೇ ಘೋಷಣೆ  ಮಾಡಿದ್ದರು.  

loader