ತೆಲುಗಿನ ಸೂಪರ್ ಸ್ಟಾರ್ ತಮ್ಮ ಕುಟುಂಬ ಸಮೇತರಾಗಿ ಮಠದಲ್ಲಿ ಸುಬ್ರಮಣ್ಯ ಶ್ರೀಗಳ ಸಾನಿಧ್ಯದಲ್ಲಿ ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಮಾಡಿಸಿದರು.

ಮಂಗಳೂರು(ಅ. 08): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಸುಪ್ರಸಿದ್ದ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆಲುಗು ನಟ ನಂದಮೂರಿ ಬಾಲಕೃಷ್ಣ ಭೇಟಿಕೊಟ್ಟಿದ್ದಾರೆ. ಕುಟುಂಬ ಸಮೇತವಾಗಿ ಆಗಮಿಸಿರುವ ಬಾಲಕೃಷ್ಣ ನಿನ್ನೆ ಸಂಪುಟ ನರಸಿಂಹ ಸುಬ್ರಹ್ಮಣ್ಯ ಮಠದಲ್ಲಿ ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು. ಇಂದು ಅವರು ಪ್ರತ್ಯೇಕವಾಗಿ ಕುಟುಂಬ ಸಮೇತರಾಗಿ ಮಠದಲ್ಲಿ ಪೂಜೆ ಸಲ್ಲಿಸಿದರು. ಸುಬ್ರಮಣ್ಯ ಸ್ವಾಮಿಯ ಸಾನಿಧ್ಯದಲ್ಲಿ ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಪೂಜೆಗಳನ್ನು ಮಾಡಿಸಿದರು.