‘ನಮ್ಮ ಮೆಟ್ರೋ'ದಲ್ಲಿ ಸಂಚರಿಸುವವರು ಮೆಟ್ರೋ ಇಳಿದು ಹೇಗೆ ಮುಂದೆ ಹೋಗುವುದು ಎಂಬ ಚಿಂತೆ ಬಿಟ್ಟು ಇನ್ನು ಮುಂದೆ ಮೆಟ್ರೋ ನಿಲ್ದಾಣದಲ್ಲೇ ಕ್ಯಾಬ್‌ ಬುಕ್‌ ಮಾಡಿ ಮುಂದಿನ ಪ್ರಯಾಣ ಕೈಗೊಳ್ಳಬಹುದು.ಮಾಚ್ ‌ರ್‍ನಿಂದ ಮೆಟ್ರೋ ನಿಲ್ದಾಣಗಳಲ್ಲಿ ಓಲಾ ಅಥವಾ ಉಬರ್‌ ಕ್ಯಾಬ್‌ ಬುಕ್ಕಿಂಗ್‌ಗೆ ಅವಕಾಶವಾಗಲಿದ್ದು ಈ ನಿಟ್ಟಿನಲ್ಲಿ ನಮ್ಮ ಮೆಟ್ರೋ ರೈಲು ನಿಗಮವು ಓಲಾ ಮತ್ತು ಉಬರ್‌ನೊಂದಿಗೆ ಬುಧವಾರ ಒಡಂಬಡಿಕೆಗೆ ಸಹಿ ಹಾಕಿವೆ. ಮೆಟ್ರೋದೊಂದಿಗೆ ಕ್ಯಾಬ್‌ ಸಂಸ್ಥೆ ಒಪ್ಪಂದ ದೇಶದಲ್ಲಿ ಇದೇ ಮೊದಲನೆಯದಾಗಿದೆ.

ಬೆಂಗಳೂರು(ಫೆ.23): ‘ನಮ್ಮ ಮೆಟ್ರೋ'ದಲ್ಲಿ ಸಂಚರಿಸುವವರು ಮೆಟ್ರೋ ಇಳಿದು ಹೇಗೆ ಮುಂದೆ ಹೋಗುವುದು ಎಂಬ ಚಿಂತೆ ಬಿಟ್ಟು ಇನ್ನು ಮುಂದೆ ಮೆಟ್ರೋ ನಿಲ್ದಾಣದಲ್ಲೇ ಕ್ಯಾಬ್‌ ಬುಕ್‌ ಮಾಡಿ ಮುಂದಿನ ಪ್ರಯಾಣ ಕೈಗೊಳ್ಳಬಹುದು.
ಮಾಚ್‌ರ್‍ನಿಂದ ಮೆಟ್ರೋ ನಿಲ್ದಾಣಗಳಲ್ಲಿ ಓಲಾ ಅಥವಾ ಉಬರ್‌ ಕ್ಯಾಬ್‌ ಬುಕ್ಕಿಂಗ್‌ಗೆ ಅವಕಾಶವಾಗಲಿದ್ದು ಈ ನಿಟ್ಟಿನಲ್ಲಿ ನಮ್ಮ ಮೆಟ್ರೋ ರೈಲು ನಿಗಮವು ಓಲಾ ಮತ್ತು ಉಬರ್‌ನೊಂದಿಗೆ ಬುಧವಾರ ಒಡಂಬಡಿಕೆಗೆ ಸಹಿ ಹಾಕಿವೆ. ಮೆಟ್ರೋದೊಂದಿಗೆ ಕ್ಯಾಬ್‌ ಸಂಸ್ಥೆ ಒಪ್ಪಂದ ದೇಶದಲ್ಲಿ ಇದೇ ಮೊದಲನೆಯದಾಗಿದೆ.

Add Asianetnews Kannada as a Preferred SourcegooglePreferred

ಮೆಟ್ರೋ ಇಳಿಯುತ್ತಿದ್ದಂತೆ ಮುಂದಿನ ಪ್ರಯಾಣಕ್ಕಾಗಿ ಬಿಎಂಟಿಸಿ ಅಥವಾ ಕ್ಯಾಬ್‌ಗಳನ್ನು ನೆಚ್ಚಿಕೊಳ್ಳುವುದು ಅನಿವಾರ್ಯವಾಗಿತ್ತು. ಇದಕ್ಕಾಗಿ ಪ್ರಯಾಣಿಕರು ಮೆಟ್ರೋ ರೈಲು ಇಳಿದ ಬಳಿಕ ಕ್ಯಾಬ್‌ಗಾಗಿ ಬುಕ್‌ ಮಾಡಿ ಬಳಿಕವಷ್ಟೇ ಪ್ರಯಾಣ ಮುಂದುವರಿಸ​ಬೇಕಾಗಿತ್ತು. ಮಾತ್ರವಲ್ಲ ಸ್ಮಾರ್ಟ್‌ ಫೋನ್‌ ಇಲ್ಲದವರು ಕ್ಯಾಬ್‌ ಬುಕ್‌ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಆದರೆ, ಇನ್ನು ಮುಂದೆ ಮೆಟ್ರೋ ನಿಲ್ದಾಣಗಳಲ್ಲೇ ಓಲಾ, ಉಬರ್‌ ಕಿಯಾಸ್ಕ್‌ಗಳು ಇರುವುದರಿಂದ ಪ್ರಯಾ​ಣಿಕರು ಮೆಟ್ರೋದಿಂದ ಇಳಿದು ಪ್ರಿ ಪೇಯ್ಡ್‌ ಟ್ಯಾಕ್ಸಿ, ಪ್ರಿಪೇಯ್ಡ್‌ ಆಟೋದಂತೆ ಕಿಯಾಸ್ಕ್‌ಗಳಲ್ಲಿ ಕ್ಯಾಬ್‌ ಬುಕ್‌ ಮಾಡಬಹುದು. ಈ ಮೂಲಕ ಮೆಟ್ರೋ ಸೇವೆ ಗ್ರಾಹಕರ ಮನೆ ಬಾಗಿಲು ತಲುಪುವಂತಾಗುತ್ತದೆ ಎಂದು ಓಲಾ ಸಂಸ್ಥೆ ಹೇಳಿದೆ. ಮೊದಲ ಹಂತದಲ್ಲಿ ಒಟ್ಟು 7 ಮೆಟ್ರೋ ನಿಲ್ದಾಣಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ.

ಪಾರ್ಕಿಂಗ್‌ ಸಮಸ್ಯೆ: ಓಲಾ, ಉಬರ್‌ ಸಂಸ್ಥೆಯ ಪ್ರತಿನಿಧಿ​ಗಳು ಕೂಡ ಕಿಯೋಸ್ಕ್‌ಗಳಲ್ಲಿ ಲಭ್ಯರಿದ್ದು ಕ್ಯಾಬ್‌ ಬುಕ್ಕಿಂಗ್‌ ಮಾಡುತ್ತಾರೆ. ಪ್ರಯಾಣಿಕರು ಅತಿ ಹತ್ತಿರ​ದಲ್ಲಿ​ರುವ ಕ್ಯಾಬ್‌ ಮೂಲಕ ಅಥವಾ ರೈಲ್ವೇ ನಿಲ್ದಾಣದಲ್ಲಿ ಪಾರ್ಕಿ​ಂಗ್‌ ಸಮಸ್ಯೆ ಇಲ್ಲದೇ ಹೋದಲ್ಲಿ ಅಲ್ಲೇ ಪಾರ್ಕ್ ಮಾಡಿ​ರುವ ಕ್ಯಾಬ್‌ಗಳಲ್ಲಿ ಪ್ರಯಾಣ ಬೆಳೆಸಬಹುದಾಗಿದೆ.

ಮಾಚ್‌ರ್‍ನಿಂದ ಮೆಟ್ರೋದ ಟ್ರಿನಿಟಿ, ಕಬ್ಬನ್‌ಪಾರ್ಕ್, ಸಿಟಿ ರೈಲು ನಿಲ್ದಾಣ, ಪೀಣ್ಯ, ಗೊರಗುಂಟೆ​ಪಾಳ್ಯ, ಯಶ​ವಂತ​ಪುರ ಹಾಗೂ ಮಹಾಲಕ್ಷ್ಮೇ ಮೆಟ್ರೋ ನಿಲ್ದಾಣ​ಗಳಲ್ಲಿ ಓಲಾ ಸೌಲಭ್ಯ ಸಿಗಲಿದೆ. ಉಬರ್‌ ಕಂಪನಿಯು ಕೆಂಪೇ​ಗೌಡ ಬಸ್‌ ನಿಲ್ದಾಣ, ನಗರ ಕೇಂದ್ರ ರೈಲು ನಿಲ್ದಾಣ, ಇಂದಿರಾನಗರ, ಭೈಯ್ಯಪ್ಪನಹಳ್ಳಿ, ಎಂಜಿ ರಸ್ತೆ, ಮೈಸೂರು ರಸ್ತೆ, ವಿಜಯನಗರ, ಮಂತ್ರಿ ಮಾಲ್‌, ಒರಾಯನ್‌ ಮಾಲ್‌(ಸೋಪ್‌ ಫ್ಯಾಕ್ಟರಿ ಬಳಿ), ಸರ್‌.ಎಂ.ವಿ.​ನಿಲ್ದಾಣ ಸೆಂಟ್ರಲ್‌ ಕಾಲೇಜು, ಜಾಲಹಳ್ಳಿ, ದಾಸರ​ಹಳ್ಳಿ, ಹೊಸಹಳ್ಳಿ ಮೊದಲಾದ ಕಡೆಗಳಲ್ಲಿ ಮಾಚ್‌ರ್‍ ಅಂತ್ಯದಲ್ಲಿ ಕಿಯಾಸ್ಕ್‌ ಆರಂಭಿಸಲಿದೆ ಎಂದು ಉಬರ್‌ ಪ್ರಕಟಿಸಿದೆ.

ರಿಯಲನ್ಸ್‌ ಜಿಯೋ ಜತೆಗೂ ಒಪ್ಪಂದ: ಮೆಟ್ರೋದಲ್ಲೂ ಇನ್ನು ಮುಂದೆ ಕ್ಯಾಶ್‌ಲೆಸ್‌ ವ್ಯವಹಾರ ಆರಂಭಗೊಳ್ಳಲಿದೆ. ಜಿಯೋ ಮನಿ ಬಳಕೆಗೆ ಮೆಟ್ರೋ ಸಿದ್ಧವಾಗಿದ್ದು ಜಿಯೋ ಗ್ರಾಹಕರಿಗೆ ಇದು ಉತ್ತಮ ಅವಕಾಶ ಒದಗಿಸಲಿದೆ. ಬುಧವಾರ ರಿಲಯನ್ಸ್‌ ಜಿಯೊ ಮತ್ತು ಉಬರ್‌ ಈ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದು ಮೆಟ್ರೋ ನಿಲ್ದಾಣಗಳಲ್ಲಿ ಉಬರ್‌ ಟ್ಯಾಕ್ಸಿ ಬಳಕೆಗೆ ಜಿಯೋ ಮನಿ ನೀಡಬಹುದಾಗಿದೆ. ಈ ಮೂಲಕ ಕೇಂದ್ರ ಸರ್ಕಾರದ ಕ್ಯಾಶ್‌ಲೆಸ್‌ ಅಭಿಯಾನವನ್ನೂ ಉತ್ತೇಜಿಸಿದಂತಾಗಿದೆ ಎಂದು ಜಿಯೋ ಹೇಳಿದೆ.