ಇಸ್ಕಾನ್ ಹಾಗೂ ಇತರೆ ಎರಡು ಸಂಸ್ಥೆಗಳು ಕ್ಯಾಂಟೀನ್‌ಗಳನ್ನು ನಡೆಸಲು ಮುಂದೆ ಬಂದಿವೆ. ಸ್ವಚ್ಛತೆ, ಗುಣಮಟ್ಟದ ಉದ್ದೇಶದಿಂದ ಇಸ್ಕಾನ್ ಬಗ್ಗೆ ಸರ್ಕಾರ ಹೆಚ್ಚು ಆಸಕ್ತವಾಗಿದೆ. ಬಹುತೇಕ ಯೋಜನೆ ಇಸ್ಕಾನ್‍ ಪಾಲಾಗುವುದು ಖಚಿತ. ಇಸ್ಕಾನ್ ತಯಾರಿಸುವ ಆಹಾರದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಪದಾರ್ಥಗಳ ಬಳಕೆ ಮಾಡುವುದಿಲ್ಲ. ಆದರೆ ಕ್ಯಾಂಟೀನ್‌ನ ಆಹಾರದಲ್ಲಿ ಇವನ್ನು ಬಳಸಬೇಕೆಂದು ಸರ್ಕಾರ ತಿಳಿಸಿದೆ.
ಬೆಂಗಳೂರು (ಮಾ.29): ರಾಜ್ಯ ಸರ್ಕಾರ ಬಜೆಟ್'ನಲ್ಲಿ ಘೋಷಿಸಿರುವಂತೆ ಏಪ್ರಿಲ್ 1ರಿಂದ ಬೆಂಗಳೂರಿನ 198 ವಾರ್ಡ್ಗಳಲ್ಲಿ ನಮ್ಮ ಕ್ಯಾಂಟೀನ್ ಆರಂಭಿಸಲು ಸಿದ್ಧತೆ ನಡೆಸಿದೆ.
ಈ ಕುರಿತು ಬಿಬಿಎಂಪಿ ಜತೆ ಮಾತುಕತೆ ಮುಗಿದಿದೆ. ಸ್ಥಳ ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ತಮಿಳುನಾಡಿನಲ್ಲಿ ನಡೆಯುತ್ತಿರುವ ಅಮ್ಮ ಕ್ಯಾಂಟೀನ್'ಗಳಿಗಿಂತ ಭಿನ್ನ ಸ್ವರೂಪದಲ್ಲಿ ಕ್ಯಾಂಟೀನ್ಗಳನ್ನು ತೆರೆಯಲು ನಿರ್ಧರಿಸಲಾಗಿದೆ.
ಇಸ್ಕಾನ್ ಹಾಗೂ ಇತರೆ ಎರಡು ಸಂಸ್ಥೆಗಳು ಕ್ಯಾಂಟೀನ್ಗಳನ್ನು ನಡೆಸಲು ಮುಂದೆ ಬಂದಿವೆ. ಸ್ವಚ್ಛತೆ, ಗುಣಮಟ್ಟದ ಉದ್ದೇಶದಿಂದ ಇಸ್ಕಾನ್ ಬಗ್ಗೆ ಸರ್ಕಾರ ಹೆಚ್ಚು ಆಸಕ್ತವಾಗಿದೆ. ಬಹುತೇಕ ಯೋಜನೆ ಇಸ್ಕಾನ್ ಪಾಲಾಗುವುದು ಖಚಿತ. ಇಸ್ಕಾನ್ ತಯಾರಿಸುವ ಆಹಾರದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಪದಾರ್ಥಗಳ ಬಳಕೆ ಮಾಡುವುದಿಲ್ಲ. ಆದರೆ ಕ್ಯಾಂಟೀನ್ನ ಆಹಾರದಲ್ಲಿ ಇವನ್ನು ಬಳಸಬೇಕೆಂದು ಸರ್ಕಾರ ತಿಳಿಸಿದೆ.
ಆರಂಭದ ದಿನಗಳಲ್ಲಿ ಎದುರಾಗುವ ಒತ್ತಡವನ್ನು ನಿಭಾಯಿಸಲು ಅನುಕೂಲವಾಗಲಿ ಎಂದು ಪಾರ್ಸಲ್ ವ್ಯವಸ್ಥೆ ನೀಡದಿರಲು ಕೂಡ ತೀರ್ಮಾನಿಸಲಾಗಿದೆ. ಮುಂದಿನ ಒಂದು ವರ್ಷ ಪಾರ್ಸಲ್ ವ್ಯವಸ್ಥೆ ಜಾರಿಗೆ ಬರುವುದು ಅನುಮಾನ ಎನ್ನಲಾಗಿದೆ.
ಇಂದಿರಾ ಹೆಸರಿಡಲು ಆಗ್ರಹ:
ತಮಿಳುನಾಡಿನ ಅಮ್ಮ ಕ್ಯಾಂಟೀನ್ ಮಾದರಿಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ನಮ್ಮ ಕ್ಯಾಂಟೀನ್'ಗೆ ಇಂದಿರಾಗಾಂಧಿ ಹೆಸರಿಡಲು ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಮುಖಂಡರು ಒತ್ತಾಯಿಸಿದ್ದಾರೆ. ಇಂದಿರಾ ಕ್ಯಾಂಟೀನ್ ಎಂಬ ಹೆಸರು ಕಾಂಗ್ರೆಸ್ ಪಕ್ಷದ ಯೋಜನೆ ಎಂಬುದನ್ನು ಬೇಗ ಗುರುತಿಸುತ್ತದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆಗೆ ಮತದಾರರನ್ನು ಆಕರ್ಷಿಸಲು ಇದು ನೆರವಾಗುತ್ತದೆ ಎಂಬುದು ಕಾಂಗ್ರೆಸ್ ನಾಯಕರ ತಂತ್ರ. ಆದರೆ ವಿವಿಧ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಇದಕ್ಕೂ ಅಪಸ್ವರ ಎದ್ದಿದೆ. ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ವಿವಿಧ ಸ್ವಾತಂತ್ರ್ಯ ಹೋರಾಟಗಾರ್ತಿಯರ ಹೆಸರಿಗೆ ಬೆಂಬಲ ವ್ಯಕ್ತವಾಗುತ್ತಿದೆ.
ಸಾರ್ವಜನಿಕರಿಗೆ ಒಟ್ಟು 3 ಲಕ್ಷ ಗೆಲ್ಲುವ ಅವಕಾಶ:
ಕ್ಯಾಂಟೀನ್'ನ ಲಾಂಛನ ವಿನ್ಯಾಸ ಮತ್ತು ಕ್ಯಾಂಟೀನ್ ಒಳಾಂಗಣ ವಾಸ್ತುಶಿಲ್ಪ ವಿನ್ಯಾಸ ರೂಪಿಸಿ ಕಳುಹಿಸುವಂತೆ ಬಿಬಿಎಂಪಿ ಸಾರ್ವಜನಿಕರಿಗೆ ಮನವಿ ಮಾಡಿದೆ. ಇನ್ನು, ಆಯ್ಕೆಯಾಗುವ ಲಾಂಛನಕ್ಕೆ 1 ಲಕ್ಷ ರೂ. ಹಾಗೂ ಒಳಾಂಗಣ ವಾಸ್ತುಶಿಲ್ಪ ವಿನ್ಯಾಸಕ್ಕೆ 2 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.
ಮೆನು ಏನು?
ತಿಂಡಿಗೆ ಪೊಂಗಲ್, ಉಪಿಟ್ಟು, ಅವಲಕ್ಕಿ, ಚೌಚೌ ಬಾತ್ ಗಳಲ್ಲಿ ಒಂದು ತಿಂಡಿ. ಊಟಕ್ಕೆ ಅನ್ನ, ಸಾಂಬರ್, ಉಪ್ಪಿನಕಾಯಿ, ಮಜ್ಜಿಗೆ, ವಾರಕ್ಕೆ ಎರಡು ದಿನ ಪುಳಿಯೋಗರೆ, ಬಿಸಿಬೇಳೆ ಬಾತ್, ಜೀರಾ ರೈಸ್, ಪಲಾವ್ ಮತ್ತು ಸಿಹಿ. ಊಟ
ತಿಂಡಿ ದರ ?
ಇಸ್ಕಾನ್ ತಿಂಡಿಗೆ 15 ರೂ, ಊಟಕ್ಕೆ 20 ರೂ. ದರ ಪಟ್ಟಿ ನಿಗದಿಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಆದರೆ ಗ್ರಾಹಕರು ತಿಂಡಿಗೆ 5 ರೂ. ಹಾಗೂ ಊಟ 10 ರೂ.ಗೆ ನೀಡಬೇಕಾಗುತ್ತದೆ. ಇಸ್ಕಾನ್'ಗೆ ಉಳಿದ ಹಣವನ್ನು ಸರ್ಕಾರ ತುಂಬಿ ಕೊಡಲಿದೆ.
(ಸಾಂದರ್ಭಿಕ ಚಿತ್ರ)
