Asianet Suvarna News Asianet Suvarna News

ಯಾರಾಗಲಿದ್ದಾರೆ ನಮ್ಮ ಬೆಂಗಳೂರು ಪ್ರತಿಷ್ಠಾನದ 2016ರ ವಾರ್ಷಿಕ ವ್ಯಕ್ತಿ ?

ವಿವಿಧ ರಾಜ್ಯ, ಭಾಷೆ, ದೇಶ ಸೇರಿದಂತೆ 1 ಕೋಟಿಗೂ ಹೆಚ್ಚಿನ ಜನರು ಉದ್ಯಾನ ನಗರಿಯಲ್ಲಿ ನೆಲಸಿದ್ದಾರೆ. ಹಲವರು ಬೆಂಗಳೂರು ನಗರ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಲು ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಜಾಗತಿಕವಾಗಿ ನಮ್ಮ ನಗರ ಗುರುತಿಸಿಕೊಳ್ಳಲು ತಮ್ಮದೆ ರಂಗದಲ್ಲಿ ಶ್ರಮಿಸಿದ ಮಹನೀಯರನ್ನು ಗೌರವಿಸುವ ಸಲುವಾಗಿಯೇ ನಮ್ಮ ಬೆಂಗಳೂರು ಪ್ರತಿಷ್ಠಾನ ಈ ಕೆಲಸ ಮಾಡುತ್ತಿದೆ.

Namma Bengaluru Awards 2016 at Town Hall on Sunday

ಬೆಂಗಳೂರು(ಮಾ.09): ನಮ್ಮ ಬೆಂಗಳೂರು ಪ್ರತಿಷ್ಠಾನವು 2016ನೇ ಸಾಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಾರ್ಷಿಕ ವ್ಯಕ್ತಿಯನ್ನು ಗೌರವಿಸಲು ಅಣಿಯಾಗುತ್ತಿದೆ. ಕಳೆದ 7 ವರ್ಷಗಳಿಂದ ನಗರದಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡಿದ ಹಲವರನ್ನು ಗುರುತಿಸಿ ಸನ್ಮಾನಿಸಿದೆ.

ವಿವಿಧ ರಾಜ್ಯ, ಭಾಷೆ, ದೇಶ ಸೇರಿದಂತೆ 1 ಕೋಟಿಗೂ ಹೆಚ್ಚಿನ ಜನರು ಉದ್ಯಾನ ನಗರಿಯಲ್ಲಿ ನೆಲಸಿದ್ದಾರೆ. ಹಲವರು ಬೆಂಗಳೂರು ನಗರ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಲು ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಜಾಗತಿಕವಾಗಿ ನಮ್ಮ ನಗರ ಗುರುತಿಸಿಕೊಳ್ಳಲು ತಮ್ಮದೆ ರಂಗದಲ್ಲಿ ಶ್ರಮಿಸಿದ ಮಹನೀಯರನ್ನು ಗೌರವಿಸುವ ಸಲುವಾಗಿಯೇ ನಮ್ಮ ಬೆಂಗಳೂರು ಪ್ರತಿಷ್ಠಾನ ಈ ಕೆಲಸ ಮಾಡುತ್ತಿದೆ.

ಯಾವುದೇ ಅಪೇಕ್ಷೆ ಇಲ್ಲದೆ, ಮಹಾನಗರಿಯಾಗಿ ಬೆಳೆಯುತ್ತಿರುವ ರಾಜಧಾನಿ ಬೆಂಗಳೂರಿನ ಅಭಿವೃದ್ಧಿ, ಇಲ್ಲಿನ ಜನರ ಸುಧಾರಣೆಯನ್ನು ಬಯಸುವ ಗುರಿ ಉದ್ದೇಶವನ್ನು ಇಟ್ಟುಕೊಂಡು ರಾಜ್ಯ'ಸಭಾ ಸಂಸದ ರಾಜೀವ್ ಚಂದ್ರಶೇಖರ್ ನೇತೃತ್ವದ ನಮ್ಮ ಬೆಂಗಳೂರು ಪ್ರತಿಷ್ಠಾನ 2009ರಲ್ಲಿ ಸ್ಥಾಪನೆ ಆಯಿತು. ತಾಜ್ಯಗಳ ಸಮಸ್ಯೆ,ನೀರಿನ ಕೊರತೆ,ಕೆರೆಗಳ ಒತ್ತುವರಿ,ಮರಗಳ ಮಾರಣಹೋಮದಂತಹ ಸಾಮಾಜಿಕ ಸಮಸ್ಯೆಗಳ ವಿರುದ್ಧ ಸಾರ್ವಜನಿಕ ಧ್ವನಿಯಾಗಿ ಕಳೆದ ಏಳು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿದೆ.

ನಗರಕ್ಕೆ ಕೀರ್ತಿ ತಂದುಕೊಟ್ಟಂತ ನಿಜವಾದ ನಾಯಕರಿಗೆ ವಾರ್ಷಿಕ ಪ್ರಶಸ್ತಿಯನ್ನು ನೀಡುವ ಮೂಲಕ ಪ್ರತಿಷ್ಠಾನವು ಧನ್ಯವಾದ ಹೇಳ ಬಯಸಿ ಅರ್ಥಪೂರ್ಣ ಸಾರ್ಥಕತೆಗೆ ಸಾಕ್ಷಿಯಾಗಲಿದೆ. ವಿವಿಧ ರಂಗದ ಗಣ್ಯರು ಸಾಧನೆ ಮಾಡಿದ ನೂರಾರು ದಿಗ್ಗಜರಲ್ಲಿ ಅತ್ಯುನ್ನತರಲ್ಲಿ ಶ್ರೇಷ್ಠರಾದವರನ್ನು ಹೆಸರಿಸಲಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಸಾಹಿತ್ಯ, ಶಿಕ್ಷಣ, ಸಿನಿಮಾ, ಪತ್ರಿಕೋದ್ಯಮ, ಉದ್ಯಮ ಹೀಗೆ ಎಲ್ಲಾ ಕ್ಷೇತ್ರಗಳ 19 ಗಣ್ಯರನ್ನು ಒಳಗೊಂಡು ತೀರ್ಪುಗಾರರ ಸಮಿತಿ ರಚಿಸಲಾಗಿದ್ದು, ಖ್ಯಾತ ಉದ್ಯಮಿ ಪ್ರದೀಪ್ ಖರ್ ನೇತೃತ್ವವಹಿಸಿದ್ದಾರೆ.  ಅದರಂತೆ ನಮ್ಮ ಬೆಂಗಳೂರು ಪ್ರಶಸ್ತಿ -2016ರ 8ನೇ ಆವೃತ್ತಿಯ ಸಾಧಕರ ಗುರುತಿಸುವ ಕಾರ್ಯಕ್ಕೂ 2016 ನವೆಂಬರ್ ನಲ್ಲಿ ಚಾಲನೆ ನೀಡಲಾಗಿದ್ದು, ಐದು ವಿಭಾಗಗಳಲ್ಲಿ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು.ಈ ಪೈಕಿ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಸಾವಿರಾರು ನಾಮ ನಿರ್ದೇಶನಗಳು ಬಂದಿದ್ದವು .ಈ ಸಂಬಂಧ ಕಳೆದ ಮೂರು ತಿಂಗಳಿಂದ ಹಲವು ಸುತ್ತಿನ ಸಭೆಗಳನ್ನು ನಡೆಸಿದ ತೀರ್ಪುಗಾರರ ಸಮಿತಿ ಐದು ವಿಭಾಗದಲ್ಲಿ ಒಂದೊಂದು ವಿಭಾಗಕ್ಕೆ 6-10 ಹೆಸರುಗಳನ್ನು ಅಂತಿಮಗೊಳಿಸಿದೆ.

ನಾವು 6 ವಿಭಾಗದಲ್ಲಿ ಸಾಧಕರನ್ನು ಗುರುತಿಸುತ್ತೇವೆ

1) ವರ್ಷದ ನಮ್ಮ ಬೆಂಗಳೂರಿಗ ಪ್ರಶಸ್ತಿ

2) ವರ್ಷದ ವೈಯುಕ್ತಿಕ ನಾಗರಿಕ ಪ್ರಶಸ್ತಿ

3) ವರ್ಷದ ಸರ್ಕಾರಿ ಅಧಿಕಾರಿ ಪ್ರಶಸ್ತಿ

4) ವರ್ಷದ ಸಾಮಾಜಿಕ ಉದ್ಯಮಿ ಪ್ರಶಸ್ತಿ

5) ವರ್ಷದ ಮಾಧ್ಯಮ ವ್ಯಕ್ತಿ ಪ್ರಶಸ್ತಿ

6) ವರ್ಷದ ಉದಯೋನ್ಮುಕ ವ್ಯಕ್ತಿ ಪ್ರಶಸ್ತಿ

6 ಅತ್ಯುತ್ತಮ ವಿಜೇತರಿಗೆ ಪ್ರಶಸ್ತಿ ಪುರಸ್ಕಾರದ ಜೊತೆಗೆ ಪ್ರತಿಯೊಬ್ಬರಿಗೂ 2 ಲಕ್ಷ ರೂ. ನಗದನ್ನು ನೀಡಲಾಗುತ್ತದೆ.  ಪ್ರತಿಷ್ಠಾನವು ಪ್ರಶಸ್ತಿ, ನಗದನ್ನು ನೀಡುವ ಉದ್ದೇಶ ತಮ್ಮ ಸಾಧನೆಯನ್ನು ಇನ್ನು ಉನ್ನತಮಟ್ಟದಲ್ಲಿ ಮುಂದುವರಿಸಿಕೊಂಡು ಹೋಗುವುದಾಗಿದೆ. ಈಗಾಗಲೇ 6 ಕ್ಷೇತ್ರಗಳಲ್ಲಿ 37 ಮಂದಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ವಾರ್ಷಿಕ ವಿಜೇತರನ್ನು  ಮಾರ್ಚ್ 12, 2017 ರಂದು ಟೌನ್'ಹಾಲ್'ನಲ್ಲಿ ನಡೆಯುವ ಸಮಾರಂಭದಲ್ಲಿ ಘೋಷಿಸಲಾಗುತ್ತಿದೆ.

ಫೈನಲ್'ಗೆ ಆಯ್ಕೆಯಾಗಿರುವ ಸಾಧಕರು

ವರ್ಷದ ವೈಯುಕ್ತಿಕ ನಾಗರಿಕ ಪ್ರಶಸ್ತಿ

1) ಡಾ.ಟಿ.ವಿ. ರಾಮಚಂದ್ರ 2) ವಿ.ಎಸ್. ಬಸವರಾಜ್ 3) ಗೀತಾ ಮೆನನ್ 4) ಡಾ.ವಿಜಯಲಕ್ಷ್ಮಿ ದೇಶಮಾನೆ

5) ಸುರೇಶ್ ಮೂನ 6) ಎಸ್.ಜಿ. ಸುಶೀಲಮ್ಮ

ವರ್ಷದ ಸರ್ಕಾರಿ ಉದ್ಯಮಿ ಪ್ರಶಸ್ತಿ

1) ಟಿ. ಜಗನಾಥ್ ರಾವ್ 2) ದೀಪಿಕಾ ಬಾಜ್'ಪೇಯ್ 3) ಟಿ.ಕೃಷ್ಣಮೂರ್ತಿ ರಮೇಶ್

4) ಮಂಜುನಾಥ್ ಬಿ.ಎಸ್ 5) ವಿ. ಶಂಕರ್ 6) ಅಜಯ್ ಆರ್.ಎಂ 7) ರಾವ್ ಗಣೇಶ್ ಜನಾರ್ಧನ್

ವರ್ಷದ ಸಾಮಾಜಿಕ ಉದ್ಯಮಿ ಪ್ರಶಸ್ತಿ

1) ಅಜಂತಾ ಚಂದನ್ 2) ಅಶೋಕ್ ಗಿರಿ 3) ಜಾಸ್ಮೀನ್ ಪಾತೇಜಾ 4) ಎಚ್.ಆರ್.ಜಯರಾಂ

5)ರೋಷಿನಿ ಮುಖರ್ಜಿ 6)ಶ್ರದ್ಧ ಶರ್ಮಾ 7)ಶ್ರೀಕಾಂತ್ ಹಾಗೂ ವಿದ್ಯಾ 8) ಸುನಿಲ್ ಸವಾರಾ 9) ವಿಜಯ್ ರಾಜ್ ಶಿಶೋದಯಾ

ವರ್ಷದ ಮಾಧ್ಯಮ ವ್ಯಕ್ತಿ ಪ್ರಶಸ್ತಿ

1) ಚೇತನ್ ಆರ್ 2) ಕೀರ್ತಿ ಪ್ರಸಾದ್ 3) ಧನ್ಯ ರಾಜೇಂದ್ರನ್ 4) ನಿರಂಜನ್ ಕಗ್ಗೆರೆ 5) ಶಿಲೋಕ್ ಎಂ.ಎಲ್ 6) ಸೋಮಣ್ಣ ಮಾಜಿಮಾಡ 7) ಯತೀಶ್ ಕುಮಾರ್

ವರ್ಷದ ಉದಯೋನ್ಮುಕ ವ್ಯಕ್ತಿ ಪ್ರಶಸ್ತಿ

1) ಐಶ್ವರ್ಯ ಬಿ.ಎಸ್ 2) ಐಶ್ವರ್ಯ ಕೆ ಮೂರ್ತಿ 3) ಅಮಿತ್ ಅಮರ್'ನಾಥ್ 4) ಹರ್ಷಿಲ್ ಮಿಟ್ಟಲ್ 5)ಕಿರಣ್ ಎ 6)ನಿರಂಜನ್ ಮುಕುಂದನ್ 7) ಶಾಶ್ವತ್ ಬೇಲ್

Follow Us:
Download App:
  • android
  • ios