ಬಸವನಗುಡಿಯಲ್ಲಿ ಮೊದಲ ಕ್ಯಾಂಟೀನ್ ಶುರುವಾಗಲಿದೆ. ಬಳಿಕ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಣೆಯಾಗಲಿದೆ

ಬೆಂಗಳೂರು(ಮೇ.18): ರಾಜ್ಯ ಸರ್ಕಾರದ ಇಂದಿರಾ ಕ್ಯಾಂಟೀನ್ ಗೆ ಜೆಡಿಎಸ್ ಸೆಡ್ಡು ಹೊಡೆದಿದ್ದು, ಶೀಘ್ರದಲ್ಲಿಯೇ "ನಮ್ಮ ಅಪ್ಪಾಜಿ" ಕ್ಯಾಂಟೀನ್ ಆರಂಭಿಸಲಿದೆ.

ಈ ಕ್ಯಾಂಟೀನ್'ನಲ್ಲಿ 5 ರೂಪಾಯಿಗೆ ಬೆಳಗ್ಗಿನ ಉಪಹಾರ ಮತ್ತು 10 ರೂಪಾಯಿಗೆ ಮಧ್ಯಾಹ್ನದ ಊಟ ದೊರಯಲಿದೆ. ಜೆಡಿಎಸ್'ನ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ತಮ್ಮ ಸ್ವಂತ ಹಣದಿಂದ 'ನಮ್ಮ ಅಪ್ಪಾಜಿ ಕ್ಯಾಂಟೀನ್' ಆರಂಭಿಸಲಿದ್ದಾರೆ. ಬಸವನಗುಡಿಯಲ್ಲಿ ಮೊದಲ ಕ್ಯಾಂಟೀನ್ ಶುರುವಾಗಲಿದೆ. ಬಳಿಕ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಣೆಯಾಗಲಿದೆ.ಇಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರ ಹುಟ್ಟು ಹಬ್ಬದ ಪ್ರಯುಕ್ತ ಕ್ಯಾಂಟೀನ್ ಘೋಷಣೆಯಾಗಲಿದೆ.

ಜುಲೈ ತಿಂಗಳಿನಿಂದ ಕ್ಯಾಂಟೀನ್ ಆರಂಭವಾಗಲಿದ್ದು, 5 ರೂಪಾಯಿಗೆ ಬೆಳಗಿನ ಉಪಹಾರವಾದ ಇಡ್ಲಿ, ವಡಾ, ಖಾಲಿ ದೋಸೆ, ಚಟ್ನಿ, ಸಾಂಬಾರ್, 10 ರೂಪಾಯಿಗೆ ಟೊಮ್ಯಾಟೊ ಬಾತ್, ಬಿಸಿಬೇಳೆಬಾತ್, ಪೊಂಗಲ್, ಚಿತ್ರಾನ್ನ, ಮೊಸರನ್ನ ಇರುವ ಮಧ್ಯಾಹ್ನದ ಊಟ ಸಿಗಲಿದೆ. ಕ್ಯಾಂಟೀನ್'ಗೆ ರೈತರಿಂದ ನೇರವಾಗಿ ಆಹಾರ ಧಾನ್ಯ, ತರಕಾರಿ ಖರೀದಸಲಾಗುತ್ತದೆ.

ದೇವೇಗೌಡರ ಸಲಹೆಯಂತೆ ಸ್ವಂತ ಹಣದಿಂದ ನಮ್ಮ ಅಪ್ಪಾಜಿ ಕ್ಯಾಂಟೀನ್'ಅನ್ನು ವಿಧಾನ ಪರಿಷತ್ ಸದಸ್ಯ ಶರವಣ ಅರಂಭಿಸುತ್ತಿದ್ದಾರೆ.