ನಲಪಾಡ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಇಂದು ಈ ಸಂಬಂಧ ವಿಚಾರಣೆ ನಡೆಯಲಿದೆ. ಜೈಲಾ – ಬೇಲಾ ಎನ್ನುವ ವಿಚಾರ ಇಂದು ನಿರ್ಧಾರವಾಗಲಿದೆ.
ಬೆಂಗಳೂರು : ನಲಪಾಡ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಇಂದು ಈ ಸಂಬಂಧ ವಿಚಾರಣೆ ನಡೆಯಲಿದೆ. ಜೈಲಾ – ಬೇಲಾ ಎನ್ನುವ ವಿಚಾರ ಇಂದು ನಿರ್ಧಾರವಾಗಲಿದೆ. ಸೆಷನ್ಸ್ ಕೋರ್ಟ್’ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ಇನ್ನು ಈ ಜಾಮೀನು ಅರ್ಜಿಯಲ್ಲಿ ವಕೀಲರು ಅನೇಕ ಅಂಶಗಳನ್ನು ಸೇರಿಸಿದ್ದು, ಅದರಲ್ಲಿ 307 ಸೆಕ್ಷನ್ ಅನ್ನು ರಾಜಕೀಯ ಒತ್ತಡದಿಂದ ಸೇರಿಸಲಾಗಿದೆ. ಎಫ್ಐಆರ್ ದಾಖಲಾದ 36 ಗಂಟೆಗಳ ನಂತರ ಸೇರಿಸಲಾಗಿದೆ. 15 ಜನರ ಗುಂಪಿನಿಂದ ಹಲ್ಲೆ ನಡೆದಿದೆ.
ಆದರೆ ನಲಪಾಡ್ ಹಲ್ಲೆ ನಡೆಸಿದ್ದಾನೆ ಎನ್ನುವುದಕ್ಕೆ ಸಾಕ್ಷ್ಯ ಇಲ್ಲ. ಚುನಾವಣೆ ವೇಳೆ ಆರೋಪಿ ತಂದೆ ವರ್ಚಸ್ಸಿಗೆ ಧಕ್ಕೆ ತರುವ ಯತ್ನ ನಡೆಯುತ್ತಿದೆ ಎಂದು ಇದರಲ್ಲಿ ಸೇರಿಸಲಾಗಿದೆ. ಹಲ್ಲೆಗೊಳಗಾದ ವಿದ್ವತ್ ಹಲ್ಲೆ ಮಾಡಿದ್ದಾರೆ ಎಂದು ಕೂಡ ದೂರು ನೀಡಲಾಗಿದೆ.
ಮಗನನ್ನು ನೋಡಲು ಬಾರದ ಹ್ಯಾರಿಸ್
ಇನ್ನು ಮಗ ಜೈಲಲ್ಲಿ ಇದ್ದು ತಂದೆ ಹ್ಯಾರಿಸ್ ಮಗನನ್ನು ನೋಡಲು ಜೈಲಿಗೆ ಬರಲಿಲ್ಲ. ಆದರೆ ವಕೀಲ ಉಸ್ಮಾನ್ ಮಾತ್ರವೇ ಜೈಲಿಗೆ ಬಂದು ನಲಪಾಡ್ ಭೇಟಿ ಮಾಡಿದ್ದಾರೆ.
