ಹ್ಯಾರಿಸ್ ಪುತ್ರ ನಲಪಾಡ್’ಗೆ ಜೈಲಾ – ಬೇಲಾ..?

First Published 21, Feb 2018, 9:19 AM IST
Nalapad Custody End Today
Highlights

ಮೊಹಮ್ಮದ್​ ನಲಪಾಡ್ & ಗ್ಯಾಂಗ್ ಪೊಲೀಸ್ ಕಷ್ಟಡಿ ಇಂದಿಗೆ ಅಂತ್ಯವಾಗಲಿದೆ. ಮಧ್ಯಾಹ್ನದ ವೇಳೆಗೆ ಆರೋಪಿಗಳನ್ನು ಪೊಲೀಸರು ಕೋರ್ಟ್’ಗೆ ಹಾಜರುಪಡಿಸಲಿದ್ದಾರೆ. ನಲಪಾಡ್ ಸೇರಿ ಒಟ್ಟು 7 ಆರೋಪಿಗಳನ್ನು ಪೊಲೀಸರು ಕೋರ್ಟ್’ಗೆ ಹಾಜರುಪಡಿಸಲಿದ್ದಾರೆ.  

ಬೆಂಗಳೂರು : ಮೊಹಮ್ಮದ್​ ನಲಪಾಡ್ & ಗ್ಯಾಂಗ್ ಪೊಲೀಸ್ ಕಷ್ಟಡಿ ಇಂದಿಗೆ ಅಂತ್ಯವಾಗಲಿದೆ. ಮಧ್ಯಾಹ್ನದ ವೇಳೆಗೆ ಆರೋಪಿಗಳನ್ನು ಪೊಲೀಸರು ಕೋರ್ಟ್’ಗೆ ಹಾಜರುಪಡಿಸಲಿದ್ದಾರೆ. ನಲಪಾಡ್ ಸೇರಿ ಒಟ್ಟು 7 ಆರೋಪಿಗಳನ್ನು ಪೊಲೀಸರು ಕೋರ್ಟ್’ಗೆ ಹಾಜರುಪಡಿಸಲಿದ್ದಾರೆ.  

ಇನ್ನು ಈ ಎಲ್ಲಾ ಆರೋಪಿಗಳನ್ನು ಕೂಡ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಳೆದ 2 ದಿನಗಳಿಂದ ಪೊಲೀಸ್ ಕಷ್ಟಡಿಯಲ್ಲಿ ಇದ್ದು,  ನಿನ್ನೆ ಸೆಷನ್ಸ್ ಕೋರ್ಟ್​ನಲ್ಲಿ ಜಾಮೀನಿಗಾಗಿ ನಲಪಾಡ್ ವಕೀಲರು ಅರ್ಜಿ ಸಲ್ಲಿಸಿದ್ದರು.

ಇಂದು ವಿಚಾರಣೆಗೆ ಬಂದರೂ ಆದೇಶ ಸಾಧ್ಯತೆ ತೀರಾ ಕಡಿಮೆ ಇದ್ದು, ಆದ್ದರಿಂದ ಆರೋಪಿಗಳನ್ನು ಜೈಲಿಗೆ ಕಳುಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಗಾಯಾಳು ವಿದ್ವತ್ ಚೇತರಿಸಿಕೊಳ್ಳುವವರೆಗೂ ಜೈಲು ಶಿಕ್ಷೆ ಸಾಧ್ಯತೆ ಇದೆ.  

ಸದ್ಯ ಮಲ್ಯ ಆಸ್ಪತ್ರೆಯ ಐಸಿಯುನಲ್ಲಿ ಜೀವನ್ಮರಣ ವಿದ್ವತ್’ಗೆ ಚಿಕಿತ್ಸೆ ಮುಂದುವರಿದಿದ್ದು, ಕೊಲೆಯತ್ನ ಪ್ರಕರಣದಲ್ಲಿ ಆರೋಪಿಗಳಾಗಿರುವ ನಲಪಾಡ್ ಮತ್ತು ಗ್ಯಾಂಗ್ ವಿರುದ್ಧ IPC ಸೆಕ್ಷನ್ 307ರ ಅಡಿ ಮೊಕದ್ದಮೆ ದಾಖಲು ಮಾಡಲಾಗಿತ್ತು.

loader