ಮಾಸ್ಕೋ[ಆ.23] ರಷ್ಯಾದ ಸ್ವಾರ್ವ್ ಪೋಲ್ ನಲ್ಲಿ ನಡೆದ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತು.  ಮಹಿಳೆಯೊಬ್ಬಳು ವ್ಯಕ್ತಿಯೊಬ್ಬನ ಜತೆಗೆ ಕಾರಿನಿಂದ ಇಳಿದು ಬಾರ್‌ ವೊಂದಕ್ಕೆ ಆಗಮಿಸಿ ಶಾಂಪೇನ್ ಖರೀದಿ ಮಾಡಿ ಹೋಗುತ್ತಾಳೆ.

ಇಷ್ಟೆ ಆಗಿದ್ದರೆ ಸುದ್ದಿ ಆಗುತ್ತಿರಲಿಲ್ಲ. ಬಾರ್ ಗೆ ಆಗಮಿಸುವ ಮಹಿಳೆ ಸಂಪೂರ್ಣ ಬೆತ್ತಲೆ ಇರುತ್ತಾಳೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿದಾಡಿದ ನಂತರ ಆಕೆ ವಿಕ್ಟೋರಿಯಾಕ್ಕೆ ಸೇರಿದ ಮಾಡೆಲ್ ಎಂಬುದು ಗೊತ್ತಾಗುತ್ತದೆ.

ಮೈಕ್ರೋಫೋನ್ ಎಡವಟ್ಟು, ಜಾರಿದ ಟಿವಿ ನಿರೂಪಕಿಯ ಮೇಲುಡುಪು

ಆದರೆ ಆಕೆಯ ಜತೆಗಿದ್ದವ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎಂಬುದು ಗೊತ್ತಾಗುತ್ತದೆ. ನ್ಯಾಯಾಧೀಶ ಯುರ್ರಿ ಮಾಕ್ರೋವ್ ಮೊದಲಿಗೆ ಆರೋಪವನ್ನು ನಿರಾಕರಿಸುತ್ತಾರೆ. ಆದರೆ ಮೇಲಧಿಕಾರಿಗಳಿಂದ ಒತ್ತಡ ಬಂದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.