ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ 2013 ರಲ್ಲಿ ನಜೀಬ್ ಜಂಗ್ ಅಧಿಕಾರ ಸ್ವೀಕರಿಸಿದ್ದರು.

ನವದೆಹಲಿ (ಡಿ.22): ಅನಿರೀಕ್ಷಿತ ರಾಜಿಕೀಯ ಬೆಳವಣಿಗೆಯಲ್ಲಿ ದೆಹಲಿ ರಾಜ್ಯದ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ತಮ್ಮ ಅಧಿಕಾರವಧಿಯಲ್ಲಿ ಸಹಕಾರ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ನಜೀಬ್ ಜಂಗ್ ಧನ್ಯವಾದ ಸಲ್ಲಿಸಿದ್ದಾರೆ.

ದೆಹಲಿ ಜನರು ತೋರಿರುವ ಪ್ರೀತಿ ಹಾಗೂ ಬೆಂಬಲಕ್ಕೆ ಅಭಾರಿಯಾಗಿದ್ದೇನೆ, ರಾಷ್ಟ್ರಪತಿ ಆಡಳಿತಾವಧಿಯಲ್ಲಿ ಸುಸೂತ್ರವಾಗಿ ಸರ್ಕಾರ ನಡೆಸಲು ಅವರೆಲ್ಲರೂ ಸಹಕರಿಸಿದ್ದಾರೆ ಎಂದು ನಜೀಬ್ ಜಂಗ್ ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ದೆಹಲಿ ಮುಖ್ಯಮಂತ್ರಿಯಾಗಿರುವ ಅರವಿಂದ್ ಕೇಜ್ರಿವಾಲ್ ಅವರಿಗೂ ಜಂಗ್ ಧನ್ಯವಾದ ಸಲ್ಲಿಸಿದ್ದಾರೆ.

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ 2013 ರಲ್ಲಿ ನಜೀಬ್ ಜಂಗ್ ಅಧಿಕಾರ ಸ್ವೀಕರಿಸಿದ್ದರು.