ಗಣಿನಾಡು ಬಳ್ಳಾರಿಯಲ್ಲಿ ನೈತಿಕ ಪೊಲೀಸ್'ಗಿರಿ ಶುರುವಾಗಿದೆ. ನಗರ ರೇಡಿಯೋ ಪಾರ್ಕ್ ಬಳಿ ಇರುವ ಕಿರುಮೃಗಾಲಯಕ್ಕೆ ಎರಡು ಸಮುದಾಯದ ಯುವಕ-ಯುವತಿ ಕೂತು ಮಾತನಾಡುತ್ತಿದ್ದರು. ಇದನ್ನು ಕಂಡ ಯುವತಿಯ ಸಮುದಾಯದ ಎಂಟು ಜನರ ಗುಂಪು ಆಗಮಿಸಿ ನೈತಿಕಗಿರಿ ಬಗ್ಗೆ ಪ್ರಶ್ನೆ ಮಾಡಿ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಯುವತಿಗೆ ಕಪಾಳಮೋಕ್ಷವೂ ಮಾಡಿದ್ದಾರೆ. ಇದೀಗ ಈ ಬಗ್ಗೆ  ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿದೆ. ಹಲ್ಲೆ ಮಾಡಿದವರು ಇದುವರೆಗೆ ನಾಪತ್ತೆಯಾಗಿಲ್ಲ. ಸಾಲದಕ್ಕೆ ಯುವತಿಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಬಳ್ಳಾರಿ ಪೊಲೀಸರು ಮಾತ್ರ ಇನ್ನೂ ಶೋಧ ಕಾರ್ಯದಲ್ಲಿಯೇ ಇದ್ದಾರೆ.

ಬಳ್ಳಾರಿ(ಅ.15): ಗಣಿನಾಡು ಬಳ್ಳಾರಿಯಲ್ಲಿ ನೈತಿಕ ಪೊಲೀಸ್'ಗಿರಿ ಶುರುವಾಗಿದೆ. ನಗರ ರೇಡಿಯೋ ಪಾರ್ಕ್ ಬಳಿ ಇರುವ ಕಿರುಮೃಗಾಲಯಕ್ಕೆ ಎರಡು ಸಮುದಾಯದ ಯುವಕ-ಯುವತಿ ಕೂತು ಮಾತನಾಡುತ್ತಿದ್ದರು. ಇದನ್ನು ಕಂಡ ಯುವತಿಯ ಸಮುದಾಯದ ಎಂಟು ಜನರ ಗುಂಪು ಆಗಮಿಸಿ ನೈತಿಕಗಿರಿ ಬಗ್ಗೆ ಪ್ರಶ್ನೆ ಮಾಡಿ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾರೆ.

ಇದನ್ನು ಪ್ರಶ್ನಿಸಿದ ಯುವತಿಗೆ ಕಪಾಳಮೋಕ್ಷವೂ ಮಾಡಿದ್ದಾರೆ. ಇದೀಗ ಈ ಬಗ್ಗೆ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿದೆ. ಹಲ್ಲೆ ಮಾಡಿದವರು ಇದುವರೆಗೆ ನಾಪತ್ತೆಯಾಗಿಲ್ಲ. ಸಾಲದಕ್ಕೆ ಯುವತಿಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಬಳ್ಳಾರಿ ಪೊಲೀಸರು ಮಾತ್ರ ಇನ್ನೂ ಶೋಧ ಕಾರ್ಯದಲ್ಲಿಯೇ ಇದ್ದಾರೆ. ವಿಖಾರ್ ವಿರುದ್ಧ ನೀಡಿರುವ ದೂರು ವಾಪಾಸ್ ಪಡೆಯಬೇಕು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಫೋನ್ ಕರೆಯ ಆಡಿಯೋ ಕ್ಲಿಪ್'ನೊಂದಿಗೆ ಮತ್ತೊಮ್ಮೆ ಬಳ್ಳಾರಿ ಜಿಲ್ಲಾ ಪೊಲೀಸರಿಗೆ ದೂರು ನೀಡಿದ್ದಾರೆ. ನಮಗೆ ರಕ್ಷಣೆ ನೀಡುವಂತೆ ಯುವಕ-ಯುವತಿ ಮೊರೆ ಹೋಗಿದ್ದಾರೆ.