ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಪ್ರತಿಪಕ್ಷ ನಾಯಕ ಜಗನ್‌ಮೋಹನ್ ರೆಡ್ಡಿ ನಡುವಿನ ರಾಜಕೀಯ ಕಿತ್ತಾಟ ಪ್ರಧಾನಿ ಮೋದಿವರೆಗೂ ತಲುಪಿದೆ

ಅಮರಾವತಿ(ಅ.14): ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಪ್ರತಿಪಕ್ಷ ನಾಯಕ ಜಗನ್‌ಮೋಹನ್ ರೆಡ್ಡಿ ನಡುವಿನ ರಾಜಕೀಯ ಕಿತ್ತಾಟ ಪ್ರಧಾನಿ ಮೋದಿವರೆಗೂ ತಲುಪಿದೆ. ಕಪ್ಪುಹಣ ಕುರಿತು ಮೋದಿಗೆ ಚಂದ್ರಬಾಬು ಅವರು ಪತ್ರ ಬರೆದ ಮರುದಿನವೇ ತಾವೂ ಪ್ರತ್ಯೇಕ ಪತ್ರ ಬರೆಯುವುದಾಗಿ ಜಗನ್ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಪ್ಪುಹಣ ಬಹಿರಂಗ ಯೋಜನೆಯಡಿ (ಐಡಿಸಿ) ಒಬ್ಬ ವ್ಯಕ್ತಿ 10,000 ಕೋಟಿ ಘೋಷಿಸಿದ್ದು, ಅದು ದೊಡ್ಡ ಉದ್ಯಮಿಯೇ ಆಗಿರಬಹುದು ಎನ್ನುವ ಮೂಲಕ ನಾಯ್ಡು ಅವರು ಜಗನ್‌ರತ್ತ ಬೆರಳು ತೋರಿದ್ದರು. ಇದಕ್ಕೆ ಆಕ್ಷೇಪಿಸಿರುವ ಜಗನ್, ‘2016 ಐಡಿಸಿಯ ಸಂಪೂರ್ಣ ಪಟ್ಟಿ’ ನೀಡಬೇಕೆಂದು ಕೋರಿ ಮೋದಿಗೆ ಪತ್ರ ಬರೆಯುತ್ತೇನೆ ಎಂದಿದ್ದಾರೆ.