ದಿನಕ್ಕೊಂದು ತಿರುವು ಪಡೆಯುತ್ತಿರುವ ಸಿಬಿಐ ಅಂತರ್ಯುದ್ಧ! ಅಲೋಕ್ ವರ್ಮಾ, ರಾಕೇಶ್‌ ಆಸ್ಥಾನ ಅವರಿಗೆ ಕಡ್ಡಾಯ ರಜೆ! ಹಂಗಾಮಿ ನಿರ್ದೇಶಕರನ್ನಾಗಿ ಎಂ. ನಾಗೇಶ್ವರ್ ರಾವ್ ನೇಮಕ! ನಾಗೇಶ್ವರ್ ರಾವ್ ನೇಮಕ ಮಾಡಿ ಆದೇಶ ಹೊರಡಿಸಿದ ಪ್ರಧಾನಿ ಕಾರ್ಯಾಲಯ

ನವದೆಹಲಿ(ಅ.24): ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ಅಂತರ್ಯುದ್ಧ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. 

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಆಸ್ಥಾನ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. 

ಇನ್ನು ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ಎಂ ನಾಗೇಶ್ವರ್ ರಾವ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯ ನೇಮಕ ಮಾಡಿದೆ.

Scroll to load tweet…

ಪ್ರಧಾನಿ ನೇತೃತ್ವದ ನೇಮಕಾತಿ ಸಮಿತಿ ಎಂ. ನಾಗೇಶ್ವರ್ ರಾವ್ ರನ್ನು ಸಿಬಿಐನ ಹಂಗಾಮಿ ನಿರ್ದೇಶಕರಾಗಿ ನೇಮಕ ಮಾಡಿದ್ದು, ಅದರಂತೆ ಅಂತೆ ನಾಗೇಶ್ವರ ರಾವ್ ಅಧಿಕಾರ ಸ್ವೀಕರಿಸಿದ್ದಾರೆ. 

ಈ ಹಿಂದೆ ಅಲೋಕ್ ವರ್ಮಾ ವಿರುದ್ಧವೇ ಸುಮಾರು 10 ಪ್ರಕರಣಗಳಲ್ಲಿ ಹಲವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ರಾಕೇಶ್ ಆಸ್ತಾನ ಸಹ ಆರೋಪಿಸಿದ್ದರು. ಈ ಕುರಿತು ಸಂಪುಟ ಕಾರ್ಯದರ್ಶಿ ಹಾಗೂ ಕೇಂದ್ರ ಜಾಗೃತ ಆಯೋಗಕ್ಕೂ ಪತ್ರ ಬರೆದಿದ್ದರು.