ಬಿಬಿಎಂಪಿ ಅವಧಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ನಡೆಸಿದ್ದ ಐಎಎಸ್ ಅಧಿಕಾರಿ ಕಠಾರಿಯಾ ವರದಿಯನ್ನು ಮರು ತನಿಖೆ ನಡೆಸಲಾಗಿದೆ. ಅದನ್ನು ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಮುಂದೆ ಇಡಲಾಗುತ್ತಿದೆ. ಕಠಾರಿಯಾ ಅವರ ತನಿಖಾ ವರದಿಯಂತೆ ಇದ್ದು, ಪಾಲಿಕೆ ಕೋಟ್ಯಂತರ ನಷ್ಟವಾಗಿರೋದನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು(ಡಿ.2): ಬೆಂಗಳೂರಿನಲ್ಲಿ 2008ರಿಂದ 2015ರವರೆಗಿನ ಅವಧಿಯಲ್ಲಿ ಬಿಜೆಪಿ ಆಡಳಿತ ಇದ್ದ ಅವಧಿಯಲ್ಲಿ ಗಾಂಧಿನಗರ, ರಾಜರಾಜೇಶ್ವರಿ ನಗರ, ಮಲ್ಲೇಶ್ವರಂ ಕ್ಷೇತ್ರದಲ್ಲಿ ನಡೆದಿದ್ದ ಸಾವಿರಾರು ಕೋಟಿ ರೂ.ಮೌಲ್ಯದ ಅವ್ಯವಹಾರ ಕುರಿತು ಐಎಎಸ್ ಅಧಿಕಾರಿ ರಾಜೇಂದರ್ ಕುಮಾರ್ ಕಠಾರಿಯಾ ನಡೆಸಿದ್ದ ವರದಿಯನ್ನು ರಾಜ್ಯ ಸರ್ಕಾರ ನಿವೃತ್ತ ನ್ಯಾ.ನಾಗಮೋಹನ್ ದಾಸ್ ಸಮಿತಿ ರಚಿಸಿ ಮರು ಪರಿಶೀಲನೆಗೆ ಸೂಚನೆ ನೀಡಿತ್ತು. ಈ ದಾಖಲೆಗಳನ್ನ ಮತ್ತೊಮ್ಮೆ ಪರಾಮರ್ಶಿಸಿದ ಸಮಿತಿ ನಿನ್ನೆ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದೆ. 

ಬಿಬಿಎಂಪಿ ಅವಧಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ನಡೆಸಿದ್ದ ಐಎಎಸ್ ಅಧಿಕಾರಿ ಕಠಾರಿಯಾ ವರದಿಯನ್ನು ಮರು ತನಿಖೆ ನಡೆಸಲಾಗಿದೆ. ಅದನ್ನು ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಮುಂದೆ ಇಡಲಾಗುತ್ತಿದೆ. ಕಠಾರಿಯಾ ಅವರ ತನಿಖಾ ವರದಿಯಂತೆ ಇದ್ದು, ಪಾಲಿಕೆ ಕೋಟ್ಯಂತರ ನಷ್ಟವಾಗಿರೋದನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡರು, ಒಂದು ವೇಳೆ ತಮ್ಮ ಪಕ್ಷಕ್ಕೆ ಮುಜುಗರ ತರುವಂತಹ ವರದಿ ಮಂಡನೆ ಆದರೆ ನಾವು ದಾಖಲೆ ಸಮೇತ ಸತ್ಯಾಸತ್ಯತೆಯನ್ನು ಬಹಿರಂಗಪಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.