ಮೈಸೂರು ಜಿಲ್ಲಾಡಳಿತಕ್ಕೆ ಸರ್ಜರಿ; ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಬೆಂಗಳೂರು ಡಿಸಿಪಿಯಾಗಿ ರವಿ ಚನ್ನಣ್ಣನವರ್

First Published 15, Mar 2018, 12:03 PM IST
Mysuru District Administration Re shuffle
Highlights

ಚುನಾವಣಾ ಹೊಸ್ತಿಲಲ್ಲಿ ಮೈಸೂರಿಗೆ  ಹೊಸ ಅಧಿಕಾರಿಗಳ ತಂಡ ಆಗಮಿಸಿದೆ.  ಮೈಸೂರು ಜಿಲ್ಲಾ  ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಲು ಪುನರ್ ರಚಿಸಲಾಗಿದೆ. 

ಬೆಂಗಳೂರು (ಮಾ. 15): ಚುನಾವಣಾ ಹೊಸ್ತಿಲಲ್ಲಿ ಮೈಸೂರಿಗೆ  ಹೊಸ ಅಧಿಕಾರಿಗಳ ತಂಡ ಆಗಮಿಸಿದೆ.  ಮೈಸೂರು ಜಿಲ್ಲಾ  ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಲು ಪುನರ್ ರಚಿಸಲಾಗಿದೆ. 

 ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದ ಅಧಿಕಾರಿಗಳಿಗೆ ವರ್ಗಾವಣೆ ಬಿಸಿ ಮುಟ್ಟಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಐಎಎಸ್, ಐಪಿಎಸ್, ಐಎಫ್ ಎಸ್ ಅಧಿಕಾರಿಗಳ ಸರಣಿ ವರ್ಗಾವಣೆ ಮಾಡಲಾಗಿದೆ.  ದಕ್ಷಿಣ ವಲಯ ಐಜಿಪಿಯಾಗಿ ಸೌಮೆಂದ್ರ ಮುಖರ್ಜಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.  ಮೈಸೂರು ಜಿಲ್ಲಾ ಎಸ್ಪಿಯಾಗಿ ರವಿ ಚನ್ನಣ್ಣನವರ್ ಜಾಗಕ್ಕೆ ಅಮಿತ್ ಸಿಂಗ್ ಬಂದಿದ್ದಾರೆ.  

ಮೈಸೂರು ಜಿಲ್ಲಾಧಿಕಾರಿಯಾಗಿ ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡಿದ್ದಾರೆ.  ಖಡಕ್ ಪೊಲೀಸ್ ಆಫೀಸರ್ ಎಂದೇ ಹೆಸರಾದ ರವಿ ಚನ್ನಣ್ಣನವರ್  ಬೆಂಗಳೂರು ಡಿಸಿಪಿಯಾಗಿ ವರ್ಗಾವಣೆ ಹೊಂದಿದ್ದಾರೆ.  ಜಿಲ್ಲಾಧಿಕಾರಿ ಡಿ.ರಂದೀಪ್ ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.  ಜೊತೆಗೆ ಐಎಫ್ ಎಸ್ ಅಧಿಕಾರಿಗಳಾದ ಮೃಗಾಲಯ ಪ್ರಾಧಿಕಾರದ ನಿರ್ದೇಶಕ  ಕೊಳ್ಳೆಗಾಲಕ್ಕೆ ವರ್ಗಾವಣೆ ಮಾಡಲಾಗಿದೆ.  ಮೈಸೂರು ವಿಭಾಗದ ಡಿಸಿಎಫ್ ಎಡುಕುಂಡಲ ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ಧಾಮಕ್ಕೆ ವರ್ಗಾವಣೆ ಆಗಿದ್ದಾರೆ. 

loader