ಮೈಸೂರು (ಸೆ.29): ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಗಾಗಿ ಹಿರಿಯ ಕವಿ ಚನ್ನವೀರ ಕಣವಿ ಮೈಸೂರಿಗೆ ಆಗಮಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರೈಲಿನಲ್ಲಿ ಮೈಸೂರಿಗೆ ಆಗಮಿಸಿ ಅವರನ್ನ ಸಂಸದ ಪ್ರತಾಪಸಿಂಹ ಮೈಸೂರು ಪೇಟ ತೊಡಿಸಿ ಅಭಿನಂದಿಸಿದರು. ಈವೇಳೆ ಮಾತನಾಡಿದ ಕಣವಿ, ದಸರಾ ಉದ್ಘಾಟಕರಾಗಿ ಬರಬೇಕೆಂದು ಮುಖ್ಯಮಂತ್ರಿಗಳು ಕರೆ ಮಾಡಿದಾಗ ನನಗೆ ಅಶ್ಚರ್ಯವಾಗಿತ್ತು ಎಂದಿದ್ದಾರೆ.

ಮೊದಲ ಬಾರಿ ದಸರಾ ಉದ್ಘಾಟಗರಾಗಿ ಆಯ್ಕೆಯಾಗಿರುವುದು ಖುಷಿ ತಂದಿದೆ ಎಂದ ಕಣವಿ, ಕಾವೇರಿ, ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು. ರೈತರು ಶಾಂತಿಯುತವಾಗಿ ಹೋರಾಡಬೇಕು ಎಂದು ಮನವಿ ಮಾಡಿದರು.