ಬೀಚ್‌ನಲ್ಲಿ ಯಾರೂ ಕಂಡಿರದ ಬೃಹತ್ ಲೋಹದ ವಸ್ತು! ಯಾರ ಗಮನಕ್ಕೂ ಬಾರದೇ ಸಮುದ್ರದಲ್ಲಿ ಕಣ್ಮರೆಯಾದ ವಸ್ತು!ಮುಳಗಿದ ಹಡಗೊಂದರ ಪ್ರಮುಖ ಭಾಗವೇ ಈ ಲೋಹದ ವಸ್ತು?! ಏಲಿಯನ್ ಶಿಪ್‌ವೊಂದರ ತುಂಡರಿಸಿದ ಭಾಗ ಅಂತಾರೆ ಜನ

ಸೀಬ್ರೂಕ್(ಅ.11): ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತುವೊಂದು ಅಷ್ಟೇ ನಿಗೂಢವಾಗಿ ಸಮುದ್ರದಲ್ಲಿ ಕಣ್ಮರೆಯಾದ ಘಟನೆ ದಕ್ಷಿಣ ಕರೋಲಿನಾದ ಸೀಬ್ರೂಕ್ ನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಬೀಚ್‌ನಲ್ಲಿ ಪತ್ತೆಯಾದ ಬೃಹತ್ ಲೋಹದ ವಸ್ತು ಸಾರ್ವಜನಿಕರ ಕುತೂಹಲ ಕೆರಳಿಸಿದ್ದು, ಈ ಬೃಹತ್ ವಸ್ತು ಏನಿರಬಹುದೆಂದು ಜನ ಮಾತನಾಡಿಕೊಳ್ಳುತ್ತಿದ್ದರು.

ಆದರೆ ಕೆಲ ಸಮಯದ ಬಳಿಕ ಈ ನಿಗೂಢ ವಸ್ತು ಯಾರ ಗಮನಕ್ಕೂ ಬಾರದಂತೆ ಮತ್ತೆ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಇದೀಗ ಜನ ಆತಂಕ ಪಡುವಂತಾಗಿದೆ.

ಈ ವಸ್ತುವಿನ ಕುರಿತು ವಿವಿಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಕೆಲವರು ಇದನ್ನು ಮುಳಗಿದ ಹಡಗೊಂದರ ಭಾಗ ಇರಬಹುದು ಎಂದು ವಾದಿಸಿದರೆ, ಮತ್ತೆ ಕೆಲವರು ಸಮುದ್ರದಾಳದಲ್ಲಿ ಇರಬಹುದಾದ ಏಲಿಯನ್ ಶಿಪ್ ವೊಂದರ ಭಾಗ ಎಂದು ವಾದಿಸುತ್ತಿದ್ದಾರೆ.

ಸದ್ಯ ಈ ಬೃಹತ್ ಲೋಹದ ವಸ್ತು ಯಾವುದು?, ಅದು ಇಲ್ಲಿಗೆ ಹೇಗೆ ಬಂತು?, ಮತ್ತು ಅದು ಕಣ್ಮರೆಯಾಗಿದ್ದು ಹೇಗೆ ಎಂಬುದರ ಕುರಿತು ಸಾಗರ ತಜ್ಞರೇ ಉತ್ತರಿಸಬೇಕಿದೆ.