Asianet Suvarna News Asianet Suvarna News

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ

ಜಗತ್ಪ್ರಸಿದ್ಧ 408ನೇ ಮೈಸೂರು ದಸರಾ ಮಹೋತ್ಸವಕ್ಕೆ ಮಲ್ಲಿಗೆ ನಗರಿಯಲ್ಲಿ  ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಚಾಲನೆ ನೀಡಿದ್ದಾರೆ.
 

Mysore Dasara 2018 Inaugurated By Sudha murthy
Author
Bengaluru, First Published Oct 10, 2018, 8:07 AM IST
  • Facebook
  • Twitter
  • Whatsapp

ಬೆಂಗಳೂರು :  ಹತ್ತು ದಿನಗಳ ಕಾಲ ಕಲೆ, ಸಾಹಿತ್ಯ, ಸಂಗೀತದ ರಸದೌತಣ ನೀಡುವ ಜಗತ್ಪ್ರಸಿದ್ಧ 408ನೇ ಮೈಸೂರು ದಸರಾ ಮಹೋತ್ಸವಕ್ಕೆ ಮಲ್ಲಿಗೆ ನಗರಿಯಲ್ಲಿ  ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಚಾಲನೆ ನೀಡಿದ್ದಾರೆ.

ನಾಡಿನ ಅಧಿದೇವತೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆಯೊಡನೆ ಬೆಳಗ್ಗೆ 7.05ರಿಂದ 7.35ರ ಸಲ್ಲುವ ಶುಭ ತುಲಾ ಲಗ್ನದಲ್ಲಿ ಇಸ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿ ದಸರೆಗೆ ಚಾಲನೆ ನೀಡಿದರು.  

ಈ ವೇಳೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೇರಿದಂತೆ ಅನೇಕ ಸಚಿವ, ಶಾಸಕರು ಉಪಸ್ಥಿತಿರಿದ್ದರು. 

ಮೈಸೂರು ದಸರಾ ಅಂಗವಾಗಿ ಮಂಗಳವಾರದಂದೇ ಕ್ರೀಡಾ ದಸರಾ, ಚಲನಚಿತ್ರೋತ್ಸವ, ಆಹಾರ ಮೇಳ, ಕುಸ್ತಿ ಪಂದ್ಯಾವಳಿ, ಪುಸ್ತಕ ಮೇಳ, ವಸ್ತು ಪ್ರದರ್ಶನಗಳಿಗೆ ಚಾಲನೆ ದೊರಕಲಿದೆ. ಜೊತೆಗೆ ಹಸಿರು ಮಂಟಪ, ಗಾಜಿನ ಮನೆ, ಸಾಂಸ್ಕೃತಿಕ ಕಾರ್ಯಕ್ರಮಗಳೂ ಉದ್ಘಾಟನೆಗೊಳ್ಳಲಿವೆ.

ನವರಾತ್ರಿಯ ಮರುದಿನವಾದ ಅ.19 ವಿಜಯದಶಮಿಯಂದು ಜಂಬೂ ಸವಾರಿ ನಡೆಯಲಿದೆ. ಸಂಜೆ 7ಕ್ಕೆ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತಿನಲ್ಲಿ ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲ ಗೌರವ ವಂದನೆ ಸ್ವೀಕರಿಸುವರು. ಅದರೊಂದಿಗೆ ದಸರೆಗೆ ತೆರೆ ಬೀಳಲಿದೆ.

Follow Us:
Download App:
  • android
  • ios