ಪತಿ ಬಿಟ್ಟು, ಮತ್ತೊಬ್ಬನೊಂದಿಗಿದ್ದ ಬ್ಯುಟಿಷಿಯನ್ ಸಾವು

First Published 26, Jun 2018, 4:44 PM IST
Mysore beautician commits suicide
Highlights

ಪ್ರತಿಷ್ಠಿತ ಹೊಟೇಲ್‌ವೊಂದರಲ್ಲಿ ಬ್ಯುಟಿಷಿಯನ್ ಆಗ ಕಾರ್ಯ ನಿರ್ವಹಿಸುತ್ತಿದ್ದರು ಈ ಮಹಿಳೆ. ಮದುವೆಯಾಗಿ ಸಂಸಾರವೂ ಸುಸೂತ್ರವಾಗಿಯೇ ನಡೆಯುತ್ತಿತ್ತು. ಈ ಇಬ್ಬರ ನಡುವೆ ಮೂರನೇಯವನ ಪ್ರವೇಶವಾಗಿದೆ. ಅಲ್ಲಿ ಏನಾಯಿತೋ ಗೊತ್ತಿಲ್ಲ, ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಈ ಮಹಿಳೆ ಶವ ಪತ್ತೆಯಾಗಿದೆ.

ಮೈಸೂರು: ಪ್ರತಿಷ್ಠಿತ ಖಾಸಗಿ ಹೊಟೇಲ್‌ವೊಂದರಲ್ಲಿ ಬ್ಯುಟಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಇಲ್ಲಿನ ದಾಮೋದರ ಬಡಾವಣೆಯಲ್ಲಿ ಈ ದುರ್ಘಟನೆ ನಡೆದಿದೆ.

ರಮ್ಯಾ (25) ಮೃತ ದುರ್ದೈವಿ. ನೇಣು ಬಿಗಿದ ಸ್ಥಿತಿಯಲ್ಲಿ ರಮ್ಯಾ ಶವ ಪತ್ತೆಯಾಗಿದೆ. 

ಆರು ವರ್ಷಗಳ ಹಿಂದೆ ಆನಂದ್ ಎಂಬುವವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದರು ರಮ್ಯಾ. ಆದರೆ, ಅವರಿಂದ ದೂರವಾಗಿ, ಸುನಿಲ್ ಎಂಬುವವರೊಂದಿಗೆ ವಾಸವಿದ್ದರು. ಸುನಿಲ್ ಕೊಲೆ ಮಾಡಿದ್ದಾರೆಂದು ಅನುಮಾನ ವ್ಯಕ್ತಪಡಿಸಿದ ರಮ್ಯಾ ಪೋಷಕರು, ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
 

loader