ಗಂಡು ಮಕ್ಕಳನ್ನು ಬಯಸುತ್ತಿದ್ದೀರಾ ಹಾಗಾದರೆ ಮಾವಿನ ಹಣ್ಣು, ತಿನ್ನಬೇಕು. ತಮ್ಮ ತೋಟದಲ್ಲಿನ ಮಾವಿನ ಹಣ್ಣು ತಿಂದ ಅನೇಕ ಮಹಿಳೆಯರು ಮಕ್ಕಳು ಪಡೆದಿದ್ದಾರೆ ಎನ್ನುವ ಹೇಳಿಕೆ ನೀಡಿದ ಹಿಂದುತ್ವದ ಪ್ರತಿಪಾದಕ ಸಂಭಾಜೀ ಭಿಡೆ ಅವರನ್ನು ನಾಶಿಕ್ ಪೌರಾಡ ಳಿತವು ಕೋರ್ಟ್ ಮೆಟ್ಟಿಲು ಏರಿಸಿದೆ. 

ನಾಶಿಕ್(ಮಹಾರಾಷ್ಟ್ರ): ‘ಗಂಡು ಮಕ್ಕಳಿಗಾಗಿ ಮಾವಿನ ಹಣ್ಣು’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಹಿಂದುತ್ವದ ಪ್ರತಿಪಾದಕ ಸಂಭಾಜೀ ಭಿಡೆ ಅವರನ್ನು ನಾಶಿಕ್ ಪೌರಾಡ ಳಿತವು ಕೋರ್ಟ್ ಮೆಟ್ಟಿಲು ಏರಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ತೋಟದಲ್ಲಿನ ಮಾವಿನ ಹಣ್ಣು ತಿಂದ ಮಹಿಳೆಯರು, ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಕಳೆದ ತಿಂಗಳು ಭಿಡೆ ಹೇಳಿದ್ದರು. 

ಭಿಡೆ ಅವರ ಹೇಳಿಕೆ ಪುಣೆಯ ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಸೇರಿದಂತೆ ಇತರ ಕೆಂಗಣ್ಣಿಗೆ ಗುರಿಯಾಗಿತು.