ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾ ಗುತ್ತದೆ. ಬು‘ವಾರ ದೇಶದೆಲ್ಲೆಡೆ ಮಡಿದ ಯೋ‘ರಿಗೆ ಗೌರವ ಸಲ್ಲಿಸಲಾಗಿದೆ. ಈ ಸಂದ‘ರ್ದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋ‘ನ ಮಗಳೊಬ್ಬಳು ಬರೆದ ಪತ್ರದ ಭಾವಾನುವಾದ ಇಲ್ಲಿದೆ. ಆಕೆಯ ಹೆಸರು ದೀಕ್ಷಾ ದ್ವಿವೇದಿ.
ಪತ್ರ ಬರೆಯುವ ನಿರ್ಧಾರವನ್ನು ತುಂಬಾ ಕಷ್ಟದಿಂದ ತೆಗೆದುಕೊಂಡಿದ್ದೇನೆ. ಆದರೆ ನನಗೆ ಅಡಗಿಸಿಡುವಂತದ್ದು ಏನೂ ಇಲ್ಲ. ಹಾಗಾಗಿ ಬರೆದೆ. ಕಪ್ಪು ಪ್ಲೇಟಿನಲ್ಲಿ ಬಿಳಿ ಅಕ್ಷರದಲ್ಲಿ ಹಿಂದಿ ಮತ್ತು ಇಂಗ್ಲಿಷಲ್ಲಿ ಸಿಬಿ ದ್ವಿವೇದಿ ಅಂತ ಬರೆದಿರೋ ನೇಮ್ ಪ್ಲೇಟನ್ನು ನಾನು ಯಾವಾಗೆಲ್ಲಾ ನೋಡುತ್ತೇನೋ ಅವಾಗೆಲ್ಲಾ ಸಿಟ್ಟು ಬರುತ್ತದೆ. ಬೇಜಾರಾಗುತ್ತದೆ. ಎಷ್ಟು ಸುಲ‘ವನ್ನು ಅವರನ್ನು ಮರೆತುಬಿಟ್ಟಿರಿ ನೀವು. ಪ್ರತೀ ವರ್ಷ ಕಾರ್ಗಿಲ್ ಹೀರೋಗಳು ಅಂತ ಹತ್ತಾರು ಬರಹಗಳು ಬರುತ್ತವೆ. ಯಾವತ್ತಾದರೊಂದು ದಿನ ಅವರ ಹೆಸರು ಕೂಡ ಬರುತ್ತದೆ ಅಂತ ಕಾಯುತ್ತಿದ್ದೆ. ಹಾಗೆ ಸುಮಾರು 16 ವರ್ಷ ಕಾದಿದ್ದೇನೆ. ಆದರೆ ಬರಲಿಲ್ಲ. ಅದೇ ಕಾರಣದಿಂದ ನಾನು ಜರ್ನಲಿಸಂ ಆರಿಸಿಕೊಂಡೆ. ಈ ಕತೆ ಹೇಳಬೇಕು ನಾನು. ಪ್ರತಿಲಾಪೇಕ್ಷೆಯಿಲ್ಲದೆ ದೇಶಕ್ಕಾಗಿ ದುಡಿಯುವವರ ಬಗ್ಗೆ ಹೇಳಬೇಕಿತ್ತು. ಹಾಗಾಗಿ ನಾನು ಇವತ್ತು ಈ ಕತೆಯನ್ನು ಹೇಳುತ್ತಿದ್ದೇನೆ.
ಯಾಕೆಂದರೆ ಅವರ ಬದುಕು ವೇಸ್ಟ್ ಆಗಬಾರದು. ನೀವು ಇವತ್ತು ಬದುಕುವ ನೆಮ್ಮದಿಯ ಬದುಕಿಗಾಗಿ ಅವರಿಗೆ ‘ನ್ಯವಾದ ಹೇಳಬೇಕು. ಸೇನೆ ಒಂದು ವೃತ್ತಿ. ಊಹೂಂ ಅದಕ್ಕಿಂತ ಜಾಸ್ತಿ. ಅದೊಂದು ಬದುಕುವ ವಿಧಾನ. ಇದೊಂಥರಾ ದುಡ್ಡಲ್ಲಿ ಅಳೆಯಲಾಗದ ಒಂದು ಜೀವವನ್ನು ಕರೆದು ಕೆಲಸ ಕೊಟ್ಟು ನಾಳೆ ನೀನು ಸತ್ತರೂ ಸಾಯಬಹುದು ಅಂತ ಹೇಳುವುದು. ಆದರೆ ಒಂದು ಮಿಲಿಯನ್ ಹಣ ಕೊಟ್ಟರೂ ಬಹುತೇಕರು ಈ ಕೆಲಸವನ್ನು ಒಪ್ಪಿಕೊಳ್ಳುವುದಿಲ್ಲ. ಸೇನೆಯ ವೃತ್ತಿಯನ್ನು ಒಪ್ಪಿಕೊಳ್ಳಬೇಕಾದರೆ ಗಟ್ಟಿ ಗುಂಡಿಗೆ ಬೇಕು. ದೇಶದ ಜನರಿಗೋಸ್ಕರ ಗುಂಡಿಗೆ ಎದೆಯೊಡ್ಡುವ ಗುಂಡಿಗೆ. ನನ್ನ ತಂದೆಗೆ ಅಂಥಾ ಗುಂಡಿಗೆ ಇತ್ತು. ಹಾಗಾಗಿಯೇ ಅವರು ಸೇನೆ ಸೇರಿಕೊಂಡಿದ್ದರು.
ಅವರು ಭಾರತೀಯ ಸೇನೆಯಲ್ಲಿ 18 ವರ್ಷ ಕೆಲಸ ಮಾಡಿದ್ದರು. ಯುದ್ಧದ ಸಂದ‘ರ್ದಲ್ಲಿ ನಿದ್ದೆ ಮಾಡಲು ಸಮಯ ಇಲ್ಲದಿದ್ದರೂ ಅಮ್ಮನಿಗೊಂದು ಪತ್ರ ಬರೆದಿದ್ದರು. ಆ ಪತ್ರ ಹೀಗಿತ್ತು-
ಡಿಯರ್ ಭಾವನಾ,
ಸಿಹಿಮುತ್ತುಗಳು. ಟಿವಿಯಲ್ಲಿ ತೋರಿಸುತ್ತಿರುವ ಸುದ್ದಿಗಳೆಲ್ಲಾ ನಿಜ. ಆದರೆ ಅವುಗಳಲ್ಲಿ ಎಲ್ಲವೂ ಸತ್ಯವಲ್ಲ. ಹಾಗಾಗಿ ಅವುಗಳನ್ನೆಲ್ಲಾ ನಂಬಬೇಡ. ದೇವರ ಮೇಲೆ ನಂಬಿಕೆ ಇರಲಿ. ದೇಶಕ್ಕಾಗಿ ಮಡಿದ ಎರಡು ದಿನ ಮೊದಲು ಅವರು ಬರೆದ ಪತ್ರದ ಸಾಲುಗಳಿವು. ನನ್ನ ತಂದೆ ಒಬ್ಬ ಫ್ಯಾಮಿಲಿ ಮ್ಯಾನ್ ಆಗಿದ್ದರು. ನನ್ನ ಅಮ್ಮ ಮನೆಯ ಬಾಸ್ ಆಗಿದ್ದರು. ನಮ್ಮ ಸ್ಕೂಲಲ್ಲಿ ಪರೀಕ್ಷೆ ಇರುವಾಗೆಲ್ಲಾ ಅವರು ರಜೆ ತೆಗೆದುಕೊಂಡು ಮನೆಗೆ ಬರುತ್ತಿದ್ದರು. ನನ್ನ ತಂಗಿಯಂತೂ ಅವರಿಲ್ಲದೇ ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳುವುದು ಅಂತ ಗಾಬರಿಯಾಗುತ್ತಿದ್ದಳು. ನನಗೆ ಇವತ್ತಿಗೂ ಆಶ್ಚರ್ಯ ಇದೆ. ಯುದ್ಧ ನಡೆಯುತ್ತಿರುವಾಗ ಅವರು ಹೇಗೆ ಅಷ್ಟು ನಿರ್ಭಾವುಕವಾಗಿ ಪತ್ರ ಬರೆದರು. ಗೊತ್ತಿಲ್ಲ. ನನಗಿನ್ನೂ ನೆನಪಿದೆ. ಸ್ಯಾಟ್‌ಲೈನ್ ಫೋನ್ ಮೂಲಕ ಫೋನ್ ಮಾಡಿ ಇಲ್ಲಿನ ವಾತಾವರಣ ಸರಿ ಇಲ್ಲ ಎಂದಿದ್ದರು. ಅದು ಬಿಟ್ಟರೆ ಬೇರೆ ಮಾತೇ ಆಡಿರಲಿಲ್ಲ. ಎಂಥಾ ನಿಸ್ವಾರ್ಥ ಮನಸ್ಸು ಅವರದು.
ಯುದ್ಧದ ಸಮಯದಲ್ಲಿ ಎಲ್ಲಾ ವಿ‘ಾಗಕ್ಕೂ ಕೆಲಸ ಇರುವುದಿಲ್ಲ. ಯುದ್ಧ ನಡೆಯುವಾಗ ಫಿರಂಗಿ ದಳದ ಜೊತೆ ಬಂದೂಕುಧಾರಿಗಳು ಇರಬೇಕು. ನನ್ನ ತಂದೆ ಮೇಜರ್ ಸಿ.ಬಿ. ದ್ವಿವೇದಿ ಒಬ್ಬ ಹೆಮ್ಮೆಯ ಬಂದೂಕು‘ಾರಿಯಾಗಿದ್ದರು. ಅವರು ಫಿರಂಗಿಯ ಮೇಲೆ ಕುಳಿತು ಶತ್ರುಗಳ ಮೇಲೆ ರಾತ್ರಿಯಿಂದ ಬೆಳಗಿನವರೆಗೂ ಗುಂಡಿನ ಮಳೆ ಸುರಿಸುತ್ತಿದ್ದರು. ಹೌದು, ಕಾರ್ಗಿಲ್ ಯುದ್ಧ ನಡೆದಿದ್ದು ಹಾಗೆ. ನಾವೆಲ್ಲಾ ಆರಾಮಾಗಿ ಮಲಗಿದ್ದರು. ಅಲ್ಲಿ ಸೈನಿಕರು ಕರ್ತವ್ಯ ನಿರತರಾಗಿದ್ದರು.
ಅದು 1999 ಮೇ 14ರ ಮುಂಜಾವು. ನಾನು ಯಾವತ್ತೂ ಮರೆಯುವುದಿಲ್ಲ ಅವತ್ತು 315 ಫೀಲ್ಡ್ ರೆಜಿಮೆಂಟ್ ಅನ್ನು ದ್ರಾಸ್‌ಗೆ ಕಳಿಸಲಾಗಿತ್ತು. ಆ ಕಾರ್ಗಿಲ್ ಯುದ್ಧ ಯಾರೂ ನಿರೀಕ್ಷೆ ಮಾಡಿರಲೇ ಇಲ್ಲ. ಇತಿಹಾಸದಲ್ಲೇ ಅನಿರೀಕ್ಷಿತವಾಗಿ ಶುರುವಾದ ಯುದ್ಧ ಅದು. ಆ ಯುದ್ಧ ಶುರುವಾಗುವ ಮುನ್ನ ನಾನು, ಅಮ್ಮ ಮತ್ತು ತಂಗಿ ಬೇಸಿಗೆ ರಜೆಯಲ್ಲಿ ಅವರನ್ನು ನೋಡಲೆಂದು ಹೋಗಿದ್ದೆವು. ಅಷ್ಟು ಆಸೆಯಿಂದ ಹೋದರೂ ಅವರು ನಮಗೆ ಸಿಕ್ಕಿದ್ದು 12 ಗಂಟೆ ಮಾತ್ರ. ಅವರು ತಮ್ಮ ಸಮಯವನ್ನು ಮೀಟಿಂಗ್‌ನಲ್ಲೇ ಕಳೆಯುತ್ತಿದ್ದರು.
ಆವಾಗ ಅವರು ಒಂದು ಪುಟ್ಟ ಪತ್ರ ಬರೆದಿದ್ದರು. ಹನ್ನೆರಡು ಗಂಟೆ ಸಿಕ್ಕಿದರೂ ತುಂಬಾ ಖುಷಿಯಾಯಿತು. ಬೇಗ ಮತ್ತೆ ಸಿಗೋಣ. ದುರದೃಷ್ಟ. ಅವರ ಕಡೆಯ ಸಾಲು ಸತ್ಯವಾಗಲಿಲ್ಲ. ಅವರು ಮತ್ತೆ ಯಾವತ್ತೂ ನಮಗೆ ಸಿಗಲೇ ಇಲ್ಲ.
ನಾವು ಅವತ್ತು ಕಳೆದ ಆ ಹನ್ನೆರಡು ಗಂಟೆಗಳೇ ಕೊನೆಯ ಬಾರಿ ಅವರನ್ನು ನೋಡಿದ್ದು. ಈಗ ಅನ್ನಿಸ್ತಿದೆ. ಮೆಸ್‌ನಲ್ಲಿ ಕುಳಿತು ತಿಂಡಿ ತಿನ್ನುತ್ತಾ ಮಾತನಾಡುವುದಕ್ಕಿಂತ ಅವತ್ತು ಬೇರೇನಾದರೂ ಮಾಡಬಹುದಿತ್ತು ಎಂದು. ನನ್ನ ತಂದೆ ಒಬ್ಬ ಅದ್ಭುತ ಹಾಸ್ಯ ಪ್ರಜ್ಞೆ ಇದ್ದ ವ್ಯಕ್ತಿಯಾಗಿದ್ದರು. ಅವರು ಅದ್ಭುತವಾಗಿ ಅಡುಗೆ ಮಾಡುತ್ತಿದ್ದರು. ಅದೆಲ್ಲಕ್ಕಿಂತ ಮೊದಲು ಅವರೊಬ್ಬ ಅದ್ಭುತ ಸೈನಿಕನಾಗಿದ್ದರು. ಅವರ ಜೊತೆ ಇದ್ದ ಬೇರೆ ಸೈನಿಕರೆಲ್ಲಾ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಅವರು ಅವರ ತಂಡದಲ್ಲಿದ್ದಷ್ಟು ಹೊತ್ತು ಇಬ್ಬರಿಗೆ ಗಾಯವಾಗಿತ್ತಷ್ಟೇ.
ಈ ಯುದ್ಧ ತುಂಬಾ ಕಷ್ಟಕರವಾದ ಯುದ್ಧವಾಗಿತ್ತು. ಯಾಕೆಂದರೆ ಮಾಹಿತಿಯ ಕೊರತೆ ಕಾಡುತ್ತಿತ್ತು. ಸೈನಿಕರು ಸರಿಯಾಗಿ ತಯಾರಾಗಿಯೂ ಇರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಹೇಡಿ ಶತ್ರುಗಳು ನಾಗರೀಕರ ರೂಪದಲ್ಲಿ ಎದುರಾಗಿದ್ದರು.
ನನ್ನ ತಂದೆಯ ಜೊತೆಗಿದ್ದು ಕರ್ನಲ್ ಉಪಾಧ್ಯಾಯರ್ಯಾರು ಹೇಳುವ ಪ್ರಕಾರ ಅವತ್ತು ಕೂತಿದ್ದ ಸೈನಿಕ ತಂಡದವರಿಗೆ ಯಾರಿಗೂ ಶತ್ರುಗಳು ಎಲ್ಲಿದ್ದಾರೆ ಅನ್ನುವುದೇ ಗೊತ್ತಿರಲಿಲ್ಲ. ಕತ್ತಲಲ್ಲಿದ್ದರು ಎಲ್ಲರೂ. ಒಬ್ಬ ಸೈನಿಕ ರಾತ್ರಿ ಹೇಳಿಯೇ ಬಿಟ್ಟ. ಸರ್, ನಾವು ಅಪಾಯದಲ್ಲಿದ್ದೇವೆ.
ಏನೂ ಗೊತ್ತಿಲ್ಲದೆ ಕುರುಡಾಗಿ ಯುದ್ಧ ವಲಯಕ್ಕೆ ಬಂದಿತ್ತು ತಂಡ, ಮೇಲಿನವರ ಆದೇಶದಂತೆ. ಆದರೆ ಯಾರಿಗೂ ಹೇಳುವಂತಿಲ್ಲ. ತಂದೆ ಫಿರಂಗಿಗಳನ್ನು ಎದುರು ತಂದು ನಿಲ್ಲಿಸಿದರು. ಯುದ್ಧಕ್ಕೆ ಸಜ್ಜಾದರು. ಆ ಮೇ೧೪ರಿಂದ ಮೇ೩೧ರವರೆಗಿನ ದಿನಗಳು ಅತ್ಯಂತ ಕಷ್ಟಕರವಾಗಿತ್ತು. ಯಾಕೆಂದರೆ ಒಂದು ಸಲ ಗುಂಡಿನ ಮಳೆ ಸುರಿಸಿ ತಕ್ಷಣ ಆ ಜಾಗದಿಂದ ಹಿಂದೆ ಸರಿಯಬೇಕಾಗಿತ್ತು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು.
ನಾನು ಮತ್ತು ನನ್ನ ತಂಗಿ ಕಾಶ್ಮೀರದ ಉಡಿಯಲ್ಲಿರುವಾಗ ಅವರು ಕೆಲಸ ಮಾಡುವುದನ್ನು ನೋಡಿದ್ದೆವು. ಆದರೆ ಆ ವಯಸ್ಸಲ್ಲಿ ಅವರು ಎಂಥಾ ಸೈನಿಕ ಎಂದು ಅರ್ಥ ಮಾಡಿಕೊಳ್ಳುವ ಶಕ್ತಿ ನಮಗಿರಲಿಲ್ಲ. ಆದರೆ ಅವರು ಒಬ್ಬ ಹೀರೋ ಅನ್ನುವುದು ಗೊತ್ತಿತ್ತು.
ಅದು ಜೂನ್ 2, 1999. ಅವತ್ತು ಒಂದು ‘ರ್ಮ ಸಂಕಟ ಶುರುವಾಯಿತು. ಒಂದೋ ಫೈರಿಂಗ್ ನಿಲ್ಲಿಸದೇ ಒಂದೇ ಸಮನೆ ಗುಂಡಿನ ಮಳೆ ಸುರಿಸಬೇಕಾಗಿತ್ತು. ಇಲ್ಲದಿದ್ದರೆ ಪದಾತಿದಳ ಅಪಾಯದಲ್ಲಿ ಸಿಲುಕುತ್ತಿತ್ತು. ಆದರೆ ಇದರಿಂದ ಫಿರಂಗಿ ದಳ ಅಪಾಯದಲ್ಲಿ ಸಿಲುಕಬಹುದಾಗಿತ್ತು. ಆದರೆ ನನ್ನ ತಂದೆ ಅಪಾಯಕಾರಿ ನಿರ್ಧಾರವನ್ನು ತೆಗೆದುಕೊಂಡರು. ತಮಗೆ ಅಪಾಯವಾದರೂ ಪರವಾಗಿಲ್ಲ, ಪದಾತಿದಳವನ್ನು ಕಾಪಾಡಲೇಬೇಕು ಎಂದುಕೊಂಡರು. ಅವರೇ ಎಲ್ಲರನ್ನೂ ಹುರಿದುಂಬಿಸುತ್ತಾ ಫಿರಂಗಿಯಲ್ಲಿ ಕೂತು ಶತ್ರುಗಳ ಮೇಲೆ ಗುಂಡಿನ ಮಳೆ ಸುರಿಸತೊಡಗಿದರು.
ಸ್ವಲ್ಪ ಹೊತ್ತಲ್ಲಿ ಅವರ ಪಕ್ಕದಲ್ಲೊಂದು ಶೆಲ್ ಬಿತ್ತು. ಅವರು ತಕ್ಷಣ ಕೈಯಿಂದ ಅದನ್ನು ಗುದ್ದಿದರು. ಶೆಲ್ ಬ್ಲಾಸ್ಟ್ ಆಯಿತು. ಅವರು ತನ್ನ ಕೈ ಗಾಯ ಆಯಿತು ಅಂದುಕೊಂಡರು. ಆದರೆ ಅವರ ದೇಹದಲ್ಲಿ ರಕ್ತ ಸ್ರಾವ ಶುರುವಾಗಿತ್ತು. ಈ ಶೆಲ್‌ನಿಂದಾಗಿ ಅವರು ಮತ್ತು ನಾಲ್ಕು ಮಂದಿ ತೀವ್ರವಾಗಿ ಗಾಯಗೊಂಡರು.
ಈ 315 ರೆಜಿಮೆಂಟಿನ ಮಂದಿ ಅವತ್ತು ಕತ್ತಲೆಯಲ್ಲಿ ಮುನ್ನುಗ್ಗದೇ ಇದ್ದಿದ್ದರೆ ಏನಾಗುತ್ತಿತೋ ಗೊತ್ತಿಲ್ಲ. ಆದರೆ ಅವರು ಧೈರ್ಯದಿಂದ ಮುನ್ನುಗ್ಗಿದರು. ಯುದ್ಧದಲ್ಲಿ ಗೆಲುವು ತಂದುಕೊಟ್ಟರು. ಅವರಿಗೆಲ್ಲಾ ಗೌರವ ಪದಕ ನೀಡಲಾಯಿತಾದರೂ ಅವರಿಗೆ ಸಿಗಬೇಕಾದ ಮಾನ್ಯತೆ, ಗೌರವ ಸಿಗಲಿಲ್ಲ. ಆರಾಮಾಗಿ ತಮ್ಮ ತಮ್ಮ ಮನೆಗಳಲ್ಲಿ ಇದ್ದವರು ಅವರನ್ನೆಲ್ಲಾ ಮತ್ತೆ ನೆನೆಸಿಕೊಳ್ಳಲೇ ಇಲ್ಲ
ಅವತ್ತು ‘ಭಾರತೀಯ ಸೇನೆ ಟೈಗರ್ ಹಿಲ್‌ನಲ್ಲಿ ಭಾರತದ ಧ್ವಜ ನೆಟ್ಟಿತ್ತು. ಆದರೆ ಅದನ್ನು ನೋಡಲು ನನ್ನ ತಂದೆ ಇರಲಿಲ್ಲ. ಆದರೆ ಅವರು ಖಂಡಿತವಾಗಿಯೂ ಆ ಗೆಲುವನ್ನು ಊಹಿಸಿರುತ್ತಾರೆ. ಆ ಸಂತೋಷ ಅವರ ಕಣ್ಣಲ್ಲಿತ್ತೋ ಏನೋ. ಆ ಸಂತೋಷವನ್ನು, ಆ ಹೆಮ್ಮೆಯನ್ನು ಅವರಿಂದ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ.
ಜೂನ್ 2, 1999ರಂದು ನಮ್ಮ ಪುಟ್ಟ ಕುಟುಂಬ ಕತ್ತಲೆಯಲ್ಲಿ ಮುಳುಗಿತು. ಅದಾಗಿ ಹದಿನಾರು ವರ್ಷ ಕಳೆದೇ ಹೋಗಿದೆ. ಬೇರೆಯವರಿಗೆಲ್ಲಾ ಕಾರ್ಗಿಲ್ ಯುದ್ಧದಿಂದ ಏನು ಕಳೆದುಕೊಂಡೆವು ಅನ್ನುವುದು ಗೊತ್ತಾಗಲಿಕ್ಕಿಲ್ಲ. ಆದರೆ ನನಗೆ ಮತ್ತು ನನ್ನ ಕುಟುಂಬಕ್ಕೆ ಆ ನೋವು ಇವತ್ತಿಗೂ ಇದೆ. ಅವತ್ತು ತಮ್ಮ ದೇಶಕ್ಕಾಗಿ ಬಲಿದಾನಗೈದು ದೇಶವನ್ನು ಉಳಿಸಿದ ಪ್ರತಿಯೊಬ್ಬರಿಗೂ ನನ್ನ ದೊಡ್ಡ ಸೆಲ್ಯೂಟ್. ನನ್ನ ತಂದೆ ನನ್ನ ಹೀರೋ. ಅವರಿಗೂ ಸೆಲ್ಯೂಟ್.
