ಹೊಸ ವರ್ಷಾಚರಣೆ: ಬೆಂಗ್ಳೂರಿಗೆ ಪ್ರತ್ಯೇಕ ರೂಲ್ಸ್‌..!...

ಹೊಸ ವರ್ಷಾಚರಣೆ ವೇಳೆ ಬೆಂಗಳೂರಿಗೆ ಸೀಮಿತವಾಗಿ ಅನೇಕ ನಿರ್ಬಂಧ ಇರುವ ಕಠಿಣ ನಿಯಮಗಳನ್ನು ಒಳಗೊಂಡ ಪ್ರತ್ಯೇಕ ಮಾರ್ಗಸೂಚಿ ರೂಪಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ತುರ್ತು ಸಾಲ ಆ್ಯಪ್‌ ದಂಧೆ: ಚೀನಿ ಸೇರಿ ನಾಲ್ವರ ಬಂಧನ...

 ತುರ್ತು ಸಾಲ ನೀಡುವ 11 ಮೊಬೈಲ್‌ ಆ್ಯಪ್‌ಗಳನ್ನು ಬಳಸಿಕೊಂಡು ಸಾಲ ಪಡೆದವರಿಂದ ದಬ್ಬಾಳಿಕೆಯ ಮೂಲಕ ಸಾಲ ವಸೂಲಿ ಮಾಡುತ್ತಿದ್ದ ಓರ್ವ ಚೀನಾ ಪ್ರಜೆ ಸೇರಿದಂತೆ ನಾಲ್ವರು ವ್ಯಕ್ತಿಗಳನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ.
 
‘ಕಂದಹಾರ್‌’ ಉಗ್ರ ಇಂದು ಪಾಕ್‌ ಜೈಲಿಂದ ರಿಲೀಸ್‌...

ಕಂದಹಾರ್‌ ವಿಮಾನ ಅಪಹರಣ ಪ್ರಕರಣದ ವೇಳೆ ಭಾರತದ ಜೈಲಿನಿಂದ 1999ರಲ್ಲಿ ಬಿಡುಗಡೆಯಾಗಿದ್ದ, ಅಮೆರಿಕ ಮೂಲದ ತನಿಖಾ ಪತ್ರಕರ್ತ ಡೇನಿಯಲ್‌ ಪರ್ಲ್ ಹತ್ಯೆ ಪ್ರಕರಣ ಸಂಬಂಧ 2002ರಿಂದ ಪಾಕಿಸ್ತಾನ ಜೈಲಿನಲ್ಲಿದ್ದ ಅಲ್‌ಖೈದಾ ಉಗ್ರ ಅಹಮದ್‌ ಒಮರ್‌ ಸಯೀದ್‌ ಶೇಖ್‌ ಹಾಗೂ ಆತನ ಮೂವರು ಸಹಚರರು ಶನಿವಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಜಪಾನ್‌ನಲ್ಲಿ ಹೊಸ ತಳಿಯ ವೈರಸ್; ಇನ್ನೂ 10 ವರ್ಷಗಳ ಕಾಲ ಕೊರೋನಾ ಕಾಟ...

 ಬ್ರಿಟನ್‌ನಲ್ಲಿ ಕಾಣಿಸಿಕೊಂಡ ಹೊಸ ತಳಿಯ ವೈರಸ್ ಇದೀಗ ಜಪಾನ್‌ನಲ್ಲಿಯೂ ಕಾಣಿಸಿಕೊಂಡಿದೆ. ಡಿಸೆಂಬರ್ 18ರಿಂದ 21ರವರೆಗೆ ಬ್ರಿಟನ್‌ನಿಂದ ತೆರಳಿದ ಐವರಿಗೆ ಸೋಂಕು ತಗುಲಿದೆ. 

ಬಾಕ್ಸಿಂಗ್ ಡೇ ಟೆಸ್ಟ್‌: ಟೀಂ ಇಂಡಿಯಾಗೆ ಮೊದಲ ದಿನದ ಗೌರವ...

ಟೀಂ ಇಂಡಿಯಾ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ವಿರುದ್ದ ಪ್ರಾಬಲ್ಯ ಮೆರೆದಿದೆ. 

ಈ ಆವತಾರಗಳಿಂದ ಸಖತ್‌ ಟ್ರೋಲ್‌ ಆದ ಪ್ರಿಯಾಂಕಾ ಚೋಪ್ರಾ!...

ಕ್ವಾಂಟಿಕೋ ಸ್ಟಾರ್‌ ಪ್ರಿಯಾಂಕಾ ಚೋಪ್ರಾ ಯಾವಾಗಲೂ ತಮ್ಮ ಫ್ಯಾಷನ್‌ ಸೆನ್ಸ್‌ನಿಂದ ಗಮನಸೆಳೆಯುತ್ತಾರೆ. ತಮ್ಮ ಸ್ಟೈಲ್‌ ಸ್ಟೇಟ್ಮೆಂಟ್‌ಗಳಿಂದ ರೆಡ್ ಕಾರ್ಪೆಟ್ ಫಂಕ್ಷನ್‌ಗಳಲ್ಲಿ ಮಿಂಚಿದ್ದಾರೆ ಈ ನಟಿ. ಆದರೆ ಪಿಗ್ಗಿ ಕೆಲವು ಡ್ರೆಸ್‌ಗಳ ಫ್ಯಾಷನ್ ಪ್ರಿಯರ ಗಮನ ಸೆಳೆಯುವಲ್ಲಿ ಸೋತಿವೆ. ಅದಕ್ಕಿಂತ ಹೆಚ್ಚಾಗಿ ಅವರ ಔಟ್‌ ಫಿಟ್‌ಗಳು ಫ್ಯಾಷನ್ ಪೊಲೀಸರಿಂದ ನೆಗೆಟಿವ್‌ ಕಾಮೆಂಟ್‌ಗಳನ್ನು ಗಳಿಸಿವೆ.

8 ತಿಂಗಳ ಬಳಿಕ ಪ್ಲೇ ಸ್ಟೋರ್‌ನಲ್ಲಿ WHO Covid-19 Updates ಆ್ಯಪ್!...

ಕೋವಿಡ್ 19 ಸಂಬಂಧ ಮಾಹಿತಿ ಒದಗಿಸುವ ಆಪ್ ಒಂದನ್ನು ವಿಶ್ವ ಆರೋಗ್ಯ ಸಂಸ್ಥೆ ಕಳೆದ ಏಪ್ರಿಲ್‌ನಲ್ಲೇ ಗೂಗಲ್ ಪ್ಲೇ ಸ್ಟೋರ್‌ಗೆ ಸೇರಿಸಿತ್ತು. ಕಾರಣಾಂತರಗಳಿಂದ ಆ ಆಪ್‌ ಅನ್ನು ವಾಪಸ್ ಪಡೆದಿತ್ತು. 8 ತಿಂಗಳ ಬಳಿಕ ಮತ್ತೆ ಡಬ್ಲೂಎಚ್ಒ ಕೋವಿಡ್ 19 ಅಪ್‌ಡೇಟ್ಸ್ ಆಪ್ ಅನ್ನು ಮತ್ತೆ ಸೇರಿಸಿದೆ.

ಬೆಂಗಳೂರಿನ ಪ್ರವೈಗ್ ನೋಡಿ ಬೆಚ್ಚಿದ ಟೆಸ್ಲಾ, ಭಾರತದಲ್ಲಿ ಮಾಡೆಲ್ 3 ಬಿಡುಗಡೆ ದಿನಾಂಕ ಫಿಕ್ಸ್!...

ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಅಮೆರಿಕ ಟೆಸ್ಲಾ, ಭಾರತದಲ್ಲಿ ಕಾರು ಬಿಡುಗಡೆ ಮಾಡಲಿದೆ ಎಂದು ಹೇಳುತ್ತಲೇ ಇತ್ತು. ಟೆಸ್ಲಾ ಸಿಇಓ ಎಲನ್ ಮಸ್ಕ್ ಟ್ವೀಟ್ ಮೂಲಕ ಖಚಿತಪಡಿಸಿದ್ದರು. ಆದರೆ ಇದುವರೆಗೂ ಸಾಧ್ಯವಾಗಿಲ್ಲ. ಇದೀಗ ಬೆಂಗಳೂರಿನ ಪ್ರವೈಗ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಈ ಕಾರು ವಿಶ್ವದಲ್ಲೇ ಭಾರಿ ಸಂಚಲನ ಮೂಡಿಸಿದೆ. ಈ ಮಾಹಿತಿ ಸಿಕ್ಕ ಬೆನ್ನಲ್ಲೇ ಇದೀಗ ಟೆಸ್ಲಾ ಭಾರತದಲ್ಲಿ ಕಾರು ಬಿಡುಗಡೆ ದಿನಾಂಕ ಘೋಷಿಸಿದೆ.

ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ಬಿಜೆಪಿ ವಿರುದ್ಧ ತಿರುಗಿಬಿದ್ದ ದಳಪತಿಗಳು...

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.  ಆದ್ರೆ, ಇತ್ತ ಜೆಡಿಎಸ್‌ ವರಿಷ್ಠ ಎಚ್‌ಡಿ ದೇವೇಗೌಡ ಸಿಡಿದೆದ್ದಿದ್ದಾರೆ.

ವರ್ಕ್ ಫ್ರಮ್ ಹೋಮ್ ಮುಂದುವರಿಸಲು ರೆಡಿನಾ? ಅಧ್ಯಯನ ವರದಿಯ ಕುತೂಹಲ ಮಾಹಿತಿ ಪ್ರಕಟ!...

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಹಲವು ಕಚೇರಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಿದೆ. ಇದೀಗ ಹೆಚ್ಚಿನ ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡಿ ಎನ್ನುತ್ತಿದೆ. ಕೊರೋನಾ ಕಾರಣ ವರ್ಕ್ ಫ್ರಮ್ ಹೋಮ್ ಪಡೆದ ಹಲವರು ಇದೀಗ ಮತ್ತೆ ಆಫೀಸ್‌ಗೆ ಹಾಜರಾಗಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾದರೆ ಭಾರತೀಯರು ವರ್ಕ್ ಫ್ರಮ್ ಹೋಮ್ ಮುಂದುವರಿಸುವ ಕುರಿತು ಅಭಿಪ್ರಾಯವೇನು?