ಕರಾಚಿ(ಡಿ.26): ಕಂದಹಾರ್‌ ವಿಮಾನ ಅಪಹರಣ ಪ್ರಕರಣದ ವೇಳೆ ಭಾರತದ ಜೈಲಿನಿಂದ 1999ರಲ್ಲಿ ಬಿಡುಗಡೆಯಾಗಿದ್ದ, ಅಮೆರಿಕ ಮೂಲದ ತನಿಖಾ ಪತ್ರಕರ್ತ ಡೇನಿಯಲ್‌ ಪರ್ಲ್ ಹತ್ಯೆ ಪ್ರಕರಣ ಸಂಬಂಧ 2002ರಿಂದ ಪಾಕಿಸ್ತಾನ ಜೈಲಿನಲ್ಲಿದ್ದ ಅಲ್‌ಖೈದಾ ಉಗ್ರ ಅಹಮದ್‌ ಒಮರ್‌ ಸಯೀದ್‌ ಶೇಖ್‌ ಹಾಗೂ ಆತನ ಮೂವರು ಸಹಚರರು ಶನಿವಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಒಮರ್‌ ಶೇಖ್‌ ಸೇರಿದಂತೆ ಇತರೆ ಮೂವರು ಆರೋಪಿಗಳ ಬಂಧನವು ಅಕ್ರಮ. ಹೀಗಾಗಿ ತಕ್ಷಣವೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಸಿಂಧ್‌ ಹೈಕೋರ್ಟ್‌ ತಾಕೀತು ಮಾಡಿದೆ. ಹೀಗಾಗಿ ಉಗ್ರರು ಶನಿವಾರ ಬಿಡುಗಡೆಯಾಗಲಿದ್ದಾರೆ.

ಬ್ರಿಟನ್‌ ಆಯ್ತು, ಈಗ ನೈಜೀರಿಯಾ ವೈರಸ್‌

1999ರಲ್ಲಿ 150 ಪ್ರಯಾಣಿಕರಿದ್ದ ಇಂಡಿಯನ್‌ ಏರ್‌ಲೈನ್ಸ್‌ ವಿಮಾನವನ್ನು ಅಪಹರಿಸಿ ಕಂದಹಾರ್‌ಗೆ ಒಯ್ಯಲಾಗಿತ್ತು. ಪ್ರಯಾಣಿಕರ ಸುರಕ್ಷಿತ ಬಿಡುಗಡೆಗಾಗಿ ಅಂದಿನ ಕೇಂದ್ರ ಸರ್ಕಾರ ಒಮರ್‌ ಶೇಖ್‌, ಮೌಲಾನಾ ಮಸೂದ್‌ ಅಜರ್‌ ಮತ್ತಿತರ ಉಗ್ರರನ್ನು ಭಾರತದ ಜೈಲಿನಿಂದ ಬಿಡುಗಡೆ ಮಾಡಿತ್ತು.