Asianet Suvarna News Asianet Suvarna News

ಜಪಾನ್‌ನಲ್ಲಿ ಹೊಸ ತಳಿಯ ವೈರಸ್; ಇನ್ನೂ 10 ವರ್ಷಗಳ ಕಾಲ ಕೊರೋನಾ ಕಾಟ

 ಬ್ರಿಟನ್‌ನಲ್ಲಿ ಕಾಣಿಸಿಕೊಂಡ ಹೊಸ ತಳಿಯ ವೈರಸ್ ಇದೀಗ ಜಪಾನ್‌ನಲ್ಲಿಯೂ ಕಾಣಿಸಿಕೊಂಡಿದೆ. ಡಿಸೆಂಬರ್ 18ರಿಂದ 21ರವರೆಗೆ ಬ್ರಿಟನ್‌ನಿಂದ ತೆರಳಿದ ಐವರಿಗೆ ಸೋಂಕು ತಗುಲಿದೆ. 

First Published Dec 26, 2020, 11:56 AM IST | Last Updated Dec 26, 2020, 12:09 PM IST

ವಾಷಿಂಗ್‌ಟನ್ (ಡಿ. 26):  ಹಸಿದ ಬೀದಿ ನಾಯಿಯೊಂದಕ್ಕೆ ಅಪರಿಚತರಬ್ಬರು ಹೊಟ್ಟೆ ತುಂಬಾ ಊಟ ಕೊಟ್ಟಾಗ ಆನಂದಬಾಷ್ಪ ಸುರಿಸಿದೆ. ಚುರುಗುಟ್ಟಿದ ಹೊಟ್ಟೆಗೆ ಆಹಾರ ಬಿದ್ದಾಗ ಕಣ್ಣಲ್ಲಿ ಭಾಷ್ಪ ಸುರಿಸಿದ ನಾಯಿಯ ವೀಡಿಯೋ ಫುಲ್ ವೈರಲ್ ಆಗಿದೆ.  ಬ್ರಿಟನ್‌ನಲ್ಲಿ ಕಾಣಿಸಿಕೊಂಡ ಹೊಸ ತಳಿಯ ವೈರಸ್ ಇದೀಗ ಜಪಾನ್‌ನಲ್ಲಿಯೂ ಕಾಣಿಸಿಕೊಂಡಿದೆ. ಡಿಸೆಂಬರ್ 18 ರಿಂದ 21 ರವರೆಗೆ ಬ್ರಿಟನ್‌ನಿಂದ ತೆರಳಿದ ಐವರಿಗೆ ಸೋಂಕು ತಗುಲಿದೆ. 

ನ್ಯೂ ಇಯರ್ ಆಚರಣೆಗೆ ಎಷ್ಟೊಂದು ಕಂಡೀಶನ್! ಬ್ರಿಗೇಡ್ ಹೋಗೋರಿಗೆ ಟೆನ್ಷನ್

ಬ್ರಿಟನ್ ರಾಣಿ ಎಲಿಜಬೆತ್ ಜನತೆಗೆ ಕ್ರಿಸ್ಮಸ್ ಸಂದೇಶ ನೀಡಿದ್ದಾರೆ. ಡಿಸೆಂಬರ್ ಮಧ್ಯದಲ್ಲಿಯೇ ರೆಕಾರ್ಡ್ ಮಾಡಿದ ಈ ವೀಡಿಯೋ ಸಂದೇಶದಲ್ಲಿ ದೀಪಾವಳಿನ್ನು ಶ್ಲಾಘಿಸಿದ್ದಾರೆ. ಸೌದಿ ಅರೇಬಿಯಾದಲ್ಲೂ ಕೊರೋನಾ ಲಸಿಕೆ ನೀಡುವ ಕಾರ್ಯಕ್ಕೆ ಆರೋಗ್ಯ ಸಚಿವಾಲಯ ಚಾಲನೆ ನೀಡಿದೆ. ಮೊದಲಿಗೆ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಲಸಿಕೆ ಪಡೆದಿದ್ದಾರೆ. ದೇಶದ ನಾಗರಿಕರು ಹಾಗೂ ನಿವಾಸಿಗಳಿಗೆ ಇನ್ನು ಲಸಿಕೆ ನೀಡಲಾಗುವುದು. ಇವೆಲ್ಲ ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ ನೋಡಿ..!

Video Top Stories