ತ್ರಿವಳಿ ತಲಾಖ್’ ಅಪರಾಧೀಕರಣಗೊಳಿಸುವ ವಿಧೇಯಕದ ರೀತಿಯಲ್ಲೇ ಇದೀಗ ಮತ್ತೊಂದು ಬೇಡಿಕೆ ಇಡಲಾಗಿದೆ. ಮುಸ್ಲಿಮರಲ್ಲಿರುವ ಬಹುಪತ್ನಿತ್ವ ನಿಷೇಧಿಸುವ ವಿಧೇಯಕವನ್ನೂ ಸಿದ್ಧಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮುಸ್ಲಿಂ ಮಹಿಳಾ ಸಂಘಟನೆಗಳು ಮನವಿ ಮಾಡಿವೆ

ನವದೆಹಲಿ (ಡಿ.31): ‘ತ್ರಿವಳಿ ತಲಾಖ್’ ಅಪರಾಧೀಕರಣಗೊಳಿಸುವ ವಿಧೇಯಕದ ರೀತಿಯಲ್ಲೇ ಇದೀಗ ಮತ್ತೊಂದು ಬೇಡಿಕೆ ಇಡಲಾಗಿದೆ. ಮುಸ್ಲಿಮರಲ್ಲಿರುವ ಬಹುಪತ್ನಿತ್ವ ನಿಷೇಧಿಸುವ ವಿಧೇಯಕವನ್ನೂ ಸಿದ್ಧಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮುಸ್ಲಿಂ ಮಹಿಳಾ ಸಂಘಟನೆಗಳು ಮನವಿ ಮಾಡಿವೆ.

ನವದೆಹಲಿ: ತ್ರಿವಳಿ ತಲಾಖ್ ವಿರುದ್ಧದ ಹೋರಾಟವು ಸುಪ್ರೀಂ ಕೋರ್ಟ್ ಮತ್ತು ಲೋಕಸಭೆಯಲ್ಲಿ ಯಶಸ್ವಿಯಾಗಿರುವ ನಡುವೆಯೇ ಮುಸ್ಲಿಂ ಮಹಿಳಾ ಸಂಘಟನೆಗಳು ಈಗ ಬಹುಪತ್ನಿತ್ವದ ವಿರುದ್ಧ ಸಿಡಿದೇಳಲು ಮುಂದಾಗಿವೆ. ಮುಸ್ಲಿಂ ಸಮಾಜದಲ್ಲಿರುವ ಬಹುಪತ್ನಿತ್ವ ರದ್ದುಗೊಳಿಸುವ ವಿಧೇಯಕವನ್ನೂ ಸಿದ್ಧಪಡಿಸಬೇಕು ಎಂದು ಸರ್ಕಾರಕ್ಕೆ ಈ ಸಂಘಟನೆಗಳು ಮನವಿ ಮಾಡಿವೆ. ‘ತ್ರಿವಳಿ ತಲಾಖ್‌ಗಿಂತ ಕೆಟ್ಟ ಪದ್ಧತಿ ಬಹುಪತ್ನಿತ್ವ.

ಮುಸ್ಲಿಮರಲ್ಲಿ ಓರ್ವ ವ್ಯಕ್ತಿ 4 ಪತ್ನಿಯರನ್ನು ಹೊಂದಬಹುದಾಗಿದೆ. ಬಹುಪತ್ನಿತ್ವ ಅಸ್ತಿತ್ವದಲ್ಲಿರುವಾಗ ತ್ರಿವಳಿ ತಲಾಖನ್ನು ಅಸಿಂಧುಗೊಳಿಸುವುದು ಪರಿಣಾಮಕಾರಿಯಾಗಿರದು’ ಎಂದು ಸಂಘಟನೆಗಳು ಹೇಳಿವೆ.

ತಲಾಖ್ ಮಸೂದೆ ಆಯ್ದ ಸಮಿತಿಗೆ?: ತ್ರಿವಳಿ ತಲಾಖ್ ನಿಷೇಧ ಮಸೂದೆ ಮಂಗಳವಾರ ರಾಜ್ಯಸಭೆಯಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ. ಆದರೆ ಇಲ್ಲಿ ಮಸೂದೆ ಸರಳವಾಗಿ ಅನುಮೋದನೆ ಆಗುವುದು ಅನುಮಾನವಾಗಿದ್ದು, ಹೆಚ್ಚಿನ ಸಮಾಲೋಚನೆಗಾಗಿ ‘ಆಯ್ದ ಸಮಿತಿ’ ಸುಪರ್ದಿಗೆ ಹೋಗುವ ಸಾಧ್ಯತೆ ಇದೆ.