ಬೆಂಗಳೂರು (ಜ. 16): ಆರ್ ಎಸ್ ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್ ಹತ್ಯೆಗೆ ಮುಂಬೈ ಭೂಗತ ಲೋಕಕ್ಕೆ ಸುಪಾರಿ ಕೊಟ್ಟಿರುವ ವಿಚಾರ ದೆಹಲಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.  

ಪಾಕಿಸ್ತಾನದ ಭೂಗತ ಲೋಕ ಮತ್ತು ಮುಂಬೈ ಡಾನ್ ಗಳ ದೂರವಾಣಿ ಸಂಭಾಷಣೆಯಲ್ಲಿ ವಿಚಾರ ಬಹಿರಂಗವಾಗಿದೆ.  ಮುಂಬೈ ಡಾನ್ ಗಳ ಸುಪಾರಿ ಪಡೆದು ಕಾಸರಗೋಡು ಡಾನ್ ಸಿ.ಎಂ.ಮುಹತಾಸಿಂ ಪ್ರಭಾಕರ್ ಭಟ್ ಹತ್ಯೆಗೆ ಸ್ಕೆಚ್ ಹಾಕಿದ್ದ ಎನ್ನಲಾಗಿದೆ.  ದೂರವಾಣಿ ಸಂಭಾಷಣೆ ಮಾಹಿತಿ ಪಡೆದು ಮುಹತಾಸಿಂನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 

ಕಲ್ಲಡ್ಕ ಪ್ರಭಾಕರ ಭಟ್ ಗೆ ಕರ್ನಾಟಕ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.  ಸದ್ಯ ಆರೋಪಿ ಮುಹತಾಸಿಂ ದೆಹಲಿ ಪೊಲೀಸರ ವಶದಲ್ಲಿದ್ದಾನೆ.