Asianet Suvarna News Asianet Suvarna News

ಪಾಕಿಸ್ತಾನದ ಮಾಲುಗಳನ್ನ ಬಹಿಷ್ಕರಿಸಿದ ಗುಜರಾತ್'ನ ಮುಸ್ಲಿಮ್ ವ್ಯಾಪಾರಿಗಳು

muslim traders in gujrath boycott made in pakistan products

ವಡೋದರಾ(ಸೆ. 27): ಉರಿ ಸೇನಾ ನೆಲೆಯ ಮೇಲೆ ಪಾಕ್ ಪ್ರಚೋದಿತ ಉಗ್ರಗಾಮಿಗಳ ದಾಳಿಯನ್ನು ಪ್ರತಿಭಟಿಸಿ ಇಲ್ಲಿಯ ಕೆಲ ಮುಸ್ಲಿಂ ವ್ಯಾಪಾರಿಗಳು ಪಾಕಿಸ್ತಾನದಿಂದ ಆಮದಾದ ಪದಾರ್ಥಗಳನ್ನು ಬಹಿಷ್ಕರಿಸಿದ್ದಾರೆ. ಮುಸ್ಲಿಮ್ ಟ್ರೇಡರ್ಸ್ ಅಸೋಷಿಯೇಷನ್ ಸಂಸ್ಥೆಯ ಸದಸ್ಯರು ನಿನ್ನೆ ವಡೋದರಾದ ರಸ್ತೆಗಿಳಿದು ಪಾಕ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೇ, ಪಾಕಿಸ್ತಾನದಲ್ಲಿ ತಯಾರಾದ ಉತ್ಪನ್ನಗಳನ್ನು ಸುಟ್ಟುಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮೇಡ್ ಇನ್ ಪಾಕಿಸ್ತಾನದ ಪದಾರ್ಥಗಳನ್ನು ಬಹಿಷ್ಕರಿಸುವಂತೆ ಬೇರೆ ವ್ಯಾಪಾರಿಗಳಿಗೂ ಕರೆ ನೀಡಿದರು. ಅಲ್ಲದೇ, ಭಾರತದಾದ್ಯಂತ ಪಾಕ್ ಆಮದಿತ ಉತ್ಪನ್ನಗಳನ್ನು ನಿಷೇಧಿಸುವ ಮೂಲಕ ಶತ್ರು ದೇಶದ ಆರ್ಥಿಕತೆಗೆ ಹೊಡೆತ ಕೊಡಿ ಎಂದು ಕೇಂದ್ರ ಸರಕಾರವನ್ನೂ ಈ ಮುಸ್ಲಿಮ್ ವ್ಯಾಪಾರಿಗಳು ಒತ್ತಾಯಿಸಿದರು.

ಪಾಕಿಸ್ತಾನದಿಂದ ಸಂಬಾರ ಪದಾರ್ಥಗಳು, ಪರ್ಫ್ಯೂಮ್'ಗಳು, ಮಸ್ಕಾರಾ, ಗುಟ್ಕಾ, ಸೋಪು, ಬಟ್ಟೆ ಇತ್ಯಾದಿ ಉತ್ಪನ್ನಗಳು ಭಾರತಕ್ಕೆ ಆಮದಾಗುತ್ತವೆ. ಸಾಮಾನ್ಯವಾಗಿ ಇವುಗಳನ್ನು ಬಳಸುವುದು ಭಾರತೀಯ ಮುಸ್ಲಿಮರೇ.

Latest Videos
Follow Us:
Download App:
  • android
  • ios