ಮುಂಬೈ ಮೂಲದ ಎಂಜಿನೀಯರ್ ಆಗಿರುವ ಫಾಹಿಮ್ ಅನ್ಸಾರಿ ತಮ್ಮ ಒಂದು ಕಿಡ್ನಿಯನ್ನು ಸುಷ್ಮಾರವರಿಗೆ ದಾನ ಮಾಡಲು ಮುಂದಾಗಿದ್ದಾರೆ.
ಮುಂಬೈ (ನ.19): ಕಿಡ್ನಿ ವೈಫಲ್ಯದಿಂದ ದೆಹಲಿಯ ಎಐಐಎಂಎಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕಿಡ್ನಿ ದಾನ ಮಾಡಲು ದೇಶ, ವಿದೇಶದಲ್ಲಿ ಸಾಕಷ್ಟು ಮಂದಿ ಮುಂದೆ ಬಂದಿದ್ದಾರೆ.
ಮುಂಬೈ ಮೂಲದ ಎಂಜಿನೀಯರ್ ಆಗಿರುವ ಫಾಹಿಮ್ ಅನ್ಸಾರಿ ತಮ್ಮ ಒಂದು ಕಿಡ್ನಿಯನ್ನು ಸುಷ್ಮಾರವರಿಗೆ ದಾನ ಮಾಡಲು ಮುಂದಾಗಿದ್ದಾರೆ.
“ಮಾಲ್ಡೀವ್ಸ್ ನಲ್ಲಿ ಡ್ರಗ್ ಪ್ರಕರಣವೊಂದರಲ್ಲಿ ನಾನು ಸಿಲುಕಿದ್ದೆ. ಆ ಸಮಯದಲ್ಲಿ ನನಗೆ ಕಿರಿತ್ ಸೋಮಯ್ಯ ಹಾಗೂ ಸುಷ್ಮಾಜಿ ಸಹಾಯ ಮಾಡಿದ್ದರು. ಅವರ ಸಹಾಯದಿಂದ ನಾನು ಮನೆಗೆ ವಾಪಸ್ ಬರಲು ಸಾಧ್ಯವಾಯಿತು. ನಾನು ಅವರಿಗೆ ಋಣಿಯಾಗಿರುತ್ತೇನೆ. ಅವರ ಸಹಾಯಕ್ಕಾಗಿ ನಾನು ಒಂದು ಕಿಡ್ನಿಯನ್ನು ನೀಡಲು ತಯಾರಿದ್ದೇನೆ" ಎಂದು ಫಾಹಿಮ್ ಹೇಳಿದ್ದಾರೆ.