ಗದಗ (ಮಾ. 04): ಸರ್ಜಿಕಲ್ ಸ್ಟ್ರೈಕ್ ನಂತರ ಪಾಕ್ ಪರ ಘೋಷಣೆ ಕೂಗುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ  ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ ಗ್ರಾಮದ ಮುಸ್ಲೀಂ ಯುವಕನೊಬ್ಬ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾನೆ.  

ಮಸೂದ್ ಅಜರ್ ಸತ್ತಿಲ್ವಂತೆ, ಇದಕ್ಕೆ ಸಾಕ್ಷಿ ಕೊಟ್ಟವರು ಯಾರು?

ದಾಬಲ್ ಸಾಬ್ ಗವಾರಿ ಎಂಬ ಯುವಕ ಬಟ್ಟೂರ್ ಗ್ರಾಮದಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡಿದ್ದಾರೆ.  ಇಂದು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣನಾಗಿದ್ದಾನೆ. ಬಟ್ಟೂರ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಸರ್ಜಿಕಲ್ ಸ್ಟ್ರೈಕ್ ನಂತರ ವಿಡಿಯೋ ಬಿಡುಗಡೆ ಮಾಡಿ ಸಿಕ್ಕಿಹಾಕಿಕೊಂಡ ಪಾಕ್!

ದಾವಲಸಾಬ್ ನನ್ನು  ಲಕ್ಷ್ಕೇಶ್ವರ  ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.   ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.