ಲಾಹೋರ್[ಮಾ.03]  ಜೈಷ್ ಎ ಮೊಹಮದ್ ಉಗ್ರ ಮಸೂದ್ ಅಜರ್ ಸಾವನ್ನಪ್ಪಿದ್ದಾನೆ ಎನ್ನುವ  ಸುದ್ದಿಯೇ ಸುಳ್ಳು, ಆತ ಇನ್ನೂ ಸತ್ತಿಲ್ಲ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

ರಾವಲ್ಪಿಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಸೂದ್ ಅಜರ್​ ಲಿವರ್​​ ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾನೆ ಎಂಬ ಮಾಹಿತಿ ದೃಢವಾಗಿದ್ದರೂ ಇದನ್ನು ಒಪ್ಪಿಕೊಳ್ಳಲು ಪಾಕಿಸ್ತಾನದ ಮಾಧ್ಯಮಗಳು ಸಿದ್ಧವಾಗಿಲ್ಲ.

ಪುಲ್ವಾಮಾ ಮಾಸ್ಟರ್ ಮೈಂಡ್ ಮಸೂದ್ ಅಜರ್ ಗೊಟಕ್?

ಮಸೂದ್ ಅಜರ್​ 2008ರ ಮುಂಬೈ ದಾಳಿ, 2016ರ ಪಠಾಣ್​ಕೋಟ್​ ದಾಳಿ ಹಾಗೂ 2019 ಫೆ.14ರ ಪುಲ್ವಾಮಾ ದಾಳಿ ಮಾಡಿ ಭಾರತದಲ್ಲಿ ಅಶಾಂತಿಗೆ ಕಾರಣವಾಗಿದ್ದ ಉಗ್ರ.