ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಜಪೂತ್ ಕರಣಿ ಸೇನಾ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಇದೀಗ ಚಿತ್ರಕ್ಕೆ ಮತ್ತೊಂದು ವಿಘ್ನ ಎದುರಾಗಿದೆ.

ಲಖನೌ: ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಜಪೂತ್ ಕರಣಿ ಸೇನಾ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಇದೀಗ ಚಿತ್ರಕ್ಕೆ ಮತ್ತೊಂದು ವಿಘ್ನ ಎದುರಾಗಿದೆ.

ದೆಹಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಕ್ರೂರ ಮಹಿಳಾ ಪೀಡಕನೆಂಬ ರೀತಿಯಲ್ಲಿ ತಪ್ಪಾಗಿ ಚಿತ್ರಿಸಿರುವುದರಿಂದ ‘ಪದ್ಮಾವತಿ’ ಚಿತ್ರ ನಿಷೇಧಿಸಬೇಕೆಂದು ದೇವ್‌ಬಂದ್ ಧರ್ಮ ಗುರುಗಳ ಒಂದು ಗುಂಪು ಒತ್ತಾಯಿಸಿದೆ.

‘ಚಿತ್ರದಲ್ಲಿ ಖಿಲ್ಜಿ ವಂಶದ 2ನೇ ಆಡಳಿತ ಗಾರನನ್ನು ದುಷ್ಟ ಮತ್ತು ಕಾಮುಕ ರಾಜನೆಂಬಂತೆ ಬಿಂಬಿಸಲಾಗಿದೆ ಎಂದು ತಾನ್‌ಝೀಮ್-ಉಲೇಮಾ- ಇ-ಹಿಂದ್‌ನ ಉತ್ತರ ಪ್ರದೇಶ ಅಧ್ಯಕ್ಷ ಮೌಲಾನಾ ನದೀಂ-ಉಲ್-ವಜೀದಿ ಹೇಳಿದ್ದಾರೆ.