ಪಂಜಾಬ್​ನ ಗಡಿಯಲ್ಲಿ ಅಕ್ರಮವಾಗಿ ನುಸುಳಲು ಯತ್ನಿಸಿದ ಒಬ್ಬ ಉಗ್ರನನ್ನು ಬಿಎಸ್​ಎಫ್ ಯೋಧರು ಹೊಡೆದುರುಳಿಸಿದ್ದಾರೆ.

ನವದೆಹಲಿ (ಡಿ.03): ಪಂಜಾಬ್​ನ ಗಡಿಯಲ್ಲಿ ಅಕ್ರಮವಾಗಿ ನುಸುಳಲು ಯತ್ನಿಸಿದ ಒಬ್ಬ ಉಗ್ರನನ್ನು ಬಿಎಸ್​ಎಫ್ ಯೋಧರು ಹೊಡೆದುರುಳಿಸಿದ್ದಾರೆ.

ಗುರುದಾಸ್ ಪುರ ಜಿಲ್ಲೆ ಪಠಾಣ್​​​ಕೋಟ್​​​​ ಬಳಿಯ ದಿಂಡಾ ಗಡಿಯಲ್ಲಿ ನಾಲ್ವರು ಉಗ್ರರು ಗಡಿ ಪ್ರವೇಶಿಸಿಸಲು ಯತ್ನಿಸಿದ್ದರು. ಈ ವೇಳೆ ಗುಂಡಿನ ದಾಳಿ ನಡೆಸಿದ ಯೋಧರು, ಉಗ್ರರ ಅಕ್ರಮವಾಗಿ ಗಡಿ ಪ್ರವೇಶಿಸುವ ಯತ್ನ ವಿಫಲಗೊಳಿಸಿದ್ದಾರೆ.

ಉಳಿದ ಮೂವರು ನುಸುಳುಕೋರರು ಅಡಗಿರುವ ಶಂಕೆ ಇದ್ದು, ಶೋಧ ಕಾರ್ಯ ನಡೆದಿದೆ. ಗುರುದಾಸ್ ಪುರ, ಧಿಂಡಾ, ಬಾಮಿಯಾಲ್ ಸೆಕ್ಟರ್​ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ತೀವ್ರಾ ನಿಗಾ ಇಟ್ಟಿದ್ದು, ಎಲ್ಲೆಡೆ ಸೇನೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.