ತಲವಾರಿನಿಂದ ದಾಳಿ ನಡೆಸಿ, ಇಬ್ಬರ ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪರಂಗಿ ಪೇಟೆಯಲ್ಲಿ ನಡೆದಿದೆ.
ಮಂಗಳೂರು(ಸೆ.26): ತಲವಾರಿನಿಂದ ದಾಳಿ ನಡೆಸಿ, ಇಬ್ಬರ ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪರಂಗಿ ಪೇಟೆಯಲ್ಲಿ ನಡೆದಿದೆ.
ಅಡ್ಯಾರ್ ನಿವಾಸಿ ರಿಯಾಜ್ ಅಲಿಯಾಸ್ ಜಿಯಾ ಹಾಗೂ ಫಯಾಜ್ ಹತ್ಯೆಯಾದವರು. ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದ ಐವರ ಮೇಲೆ ದುಷ್ಕರ್ಮಿಗಳ ತಂಡ ತಲವಾರ್'ನಿಂದ ದಾಳಿ ಮಾಡಿದೆ. ಈ ಘಟನೆಯಲ್ಲಿ ಇಬ್ಬರ ಹತ್ಯೆಯಾದರೆ, ಅನಿಶ್, ಮುಸ್ತಾಕ್ ಮತ್ತು ಫಜಲ್ ಗಾಯಗೊಂಡಿದ್ದು, ಇವರ ಸ್ಥಿತಿ ಗಂಭೀರವಾಗಿದೆ.
2014ರ ಅಕ್ಟೋಬರ್ 31ರಂದು ನಡೆದಿದ್ದ ಇಜಾಜ್ ಹತ್ಯೆಗೆ ಪ್ರತೀಕಾರವಾಗಿ ದಾಳಿ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
