ಅಟೋಗೆ ಬೈಕ್'ನಿಂದ ಟಚ್  ಮಾಡಿದ್ದಾನೆಂದು ವ್ಯಕ್ಯಿಯೋರ್ವನನ್ನು ಮಚ್ಚು ಲಾಂಗು ಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರೋ ಘಟನೆ ಬೆಂಗಳೂರಿನ ಕೆಜಿ ಹಳ್ಳಿಯಲ್ಲಿ ನಡೆದಿದೆ. 

ಬೆಂಗಳೂರು(ಅ.20): ಅಟೋಗೆ ಬೈಕ್'ನಿಂದ ಟಚ್ ಮಾಡಿದ್ದಾನೆಂದು ವ್ಯಕ್ಯಿಯೋರ್ವನನ್ನು ಮಚ್ಚು ಲಾಂಗು ಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರೋ ಘಟನೆ ಬೆಂಗಳೂರಿನ ಕೆಜಿ ಹಳ್ಳಿಯಲ್ಲಿ ನಡೆದಿದೆ. 

ಕೊಲೆಯಾದ ವ್ಯಕ್ತಿಯನ್ನು ಕೆ ಜಿ ಹಳ್ಳಿ ನಿವಾಸಿ ಸೈಯದ್ ಯುಸುಪ್ ಎಂದು ಗುರುತಿಸಲಾಗಿದ್ದು, ಯುಸುಪ್ ನೆನ್ನೆ ರಾತ್ರಿ ಎಂಟು ಘಂಟೆ ಗೆ ಕೆಲಸ ಮುಗಿಸಿ ಮನಗೆ ಬಂದಿದ್ದಾರೆ, ನಂತ್ರ ಟಿ ಕುಡಿಯಲು ಒಂಬತ್ತು ಘಂಟೆ ಸುಮಾರಿಗೆ ಕೆ ಜಿ ಹಳ್ಳಿ ಹಳೆ ಪೊಲೀಸ್ ಠಾಣೆ ಬಳಿಯ ಸೋಫೀಯ ಸ್ಕೂಲ್ ಹತ್ತಿರ ತೆರಳುತಿದ್ದಾಗ ಕೆ ಜಿ ಹಳ್ಳಿ ರೌಡಿ ಶೀಟರ್ ಚಪ್ಡಿ ನದೀಮ್ ಅಟೋ ಗೆ ಟಚ್ ಅಗಿದೆ.

ಈ ವಿಚಾರವಾಗಿ ಯುಸುಪ್ ಮತ್ತು ನದೀಮ್ ನಡುವೆ ವಾಗ್ವಾದ ನಡೆದಿದ್ದು ನಂತ್ರ ಕೋಪಗೊಂಡ ನದೀಮ್ ಮತ್ತು ಅತನ ಗ್ಯಾಂಗ್ ಮಚ್ಚು ಲಾಂಗುಗಳಿಂದ ಯುಸುಪ್ ಮೇಲೆ ಹಲ್ಲೆ ಮಾಡಿದ್ದಾರೆ ಗಾಯಗೊಂಡಿದ್ದ ಯುಸುಫ್ ನನ್ನು ಬೌರಿಂಗ್ ಅಸ್ಪತ್ರೆಗೆ ಚಿಕಿತ್ಸೆ ಗೆ ದಾಖಲಿಸಿತ್ತಾದ್ರು , ತಲೆ ಮತ್ತು ಬೆನ್ನಿಗೆ ಬಲಾವಾದ ಪಟ್ಟು ಬಿದ್ದಿದ್ದ ರಿಂದ ಯುಸುಪ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೆ ಜಿ ಹಳ್ಳಿ ಪೊಲೀಸರು ಚಪ್ಡಿ ನದೀಮ್ ಮತ್ತು ಅತನ ಗ್ಯಾಂಗ್ ನ ಮತ್ತಿಬ್ಬರನ್ನು ವಶಕ್ಕೆ ಪಡೆದಿದ್ದು ಉಳಿದ ಅರೋಪಿಗಳಿಗಾಗಿ ಬಲೆ ಬೀಸಿದ್ದಾರೆ.