ಬೆಂಗಳೂರನ್ನೇ ನಡುಗಿಸಿದ್ದ ರೌಡಿ ಕೊತ್ವಾಲ್ ರಾಮಚಂದ್ರ ಮಾ. 22, 1986ರಲ್ಲಿ ತುಮಕೂರಿನಲ್ಲಿ ಕೊಲೆಯಾಗಿದ್ದನು. ಪ್ರಕರಣದಲ್ಲಿ ಆರೋಪಿಯಾಗಿದ್ದ ಶ್ರೀಧರ್, ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದರು.
ಬೆಂಗಳೂರು (ಮಾ.30): ಮೂರು ದಶಕಗಳಷ್ಟು ಹಳೆಯದಾದ ಕೊತ್ವಾಲ್ ರಾಮಚಂದ್ರ ಕೊಲೆ ಪ್ರಕರಣ ಮರುಜೀವ ಪಡೆಯುವ ಸಾಧ್ಯತೆಗಳಿದ್ದು, ಮಾಜಿ ಡಾನ್ ಅಗ್ನಿ ಶ್ರೀಧರ್'ಗೆ ಮತ್ತೆ ಕಂಟಕ ಎದುರಾಗಲಿದೆ.
ಪೊಲೀಸ್ ಮಹಾನಿರ್ದೇಶಕ ಆರ್.ಕೆ. ದತ್ತ ವಿಚಾರಣೆ ವೇಳೆ ಕೊತ್ವಾಲ್ ಕೊಲೆ ಕೇಸ್'ನಲ್ಲಿ ಭಾಗಿಯಾಗಿದ್ದೆ ಎಂದು ಅಗ್ನಿ ಶ್ರೀಧರ್ ನೀಡಿದ್ದ ಲಿಖಿತ ಹೇಳಿಕೆ ಆಧಾರದಲ್ಲಿ ಮರು ತನಿಖೆ ನಡೆಸಲಾಗುವುದೆಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರನ್ನೇ ನಡುಗಿಸಿದ್ದ ರೌಡಿ ಕೊತ್ವಾಲ್ ರಾಮಚಂದ್ರ ಮಾ. 22, 1986ರಲ್ಲಿ ತುಮಕೂರಿನಲ್ಲಿ ಕೊಲೆಯಾಗಿದ್ದನು. ಪ್ರಕರಣದಲ್ಲಿ ಆರೋಪಿಯಾಗಿದ್ದ ಶ್ರೀಧರ್, ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದರು.
ಆದರೆ ಇತ್ತೀಚೆಗೆ ಶ್ರೀಧರ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ವಿಚಾರಣೆ ನಡೆಸುವ ವೇಳೆ, ಆ ಪ್ರಕರಣಕ್ಕೆ ಸಂಬಂಧಿಸಿ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆನ್ನಲಾಗಿದೆ. ನಾನೀಗ ಬದಲಾಗಿದ್ದೇನೆ, ಆ ಕೊಲೆಯಲ್ಲಿ ತಾನು ಭಾಗಿಯಾಗಿದ್ದೆ ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಶ್ರೀಧರ್ ನೀಡಿರುವ ಲಿಖಿತ ಹೇಳಿಕೆಯಲ್ಲಿ 1986ರ ಕೊತ್ವಾಲ್ ಕೊಲೆ ಪ್ರಕರಣದಲ್ಲಿ ತಾನು ಭಾಗಿಯಾಗಿರುವ ಉಲ್ಲೇಖವೂ ಇದೆ. ಈ ಹಿನ್ನೆಲೆಯಲ್ಲಿ 1986ರ ಕೊತ್ವಾಲ್ ಮರ್ಡರ್ ಕೇಸ್ನ್ನು ರೀ-ಓಪನ್ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ.
ಬೆಂಗಳೂರು ಪೊಲೀಸ್ ಕಮಿಷನರ್ ಪ್ರವೀಣ್ ಸೂದ್, ಆ ಕೊಲೆ ಕೇಸನ್ನು ಮತ್ತೆ ತನಿಖೆಗೊಳಪಡಿಸುವ ಸೂಚನೆ ನೀಡಿದ್ದಾ.
