ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಚಿತ್ರ ನಟಿ ಪ್ರಿಯಾಂಕ ಬಂಧನವಾಗಿದೆ. 

ಚನ್ನಪಟ್ಟಣ : ಕಿರುಕುಳ ನೀಡುತ್ತಿದ್ದನೆಂಬ ಕಾರಣಕ್ಕೆ ರೌಡಿಶೀಟರ್‌ವೊಬ್ಬನ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ನಟಿ ಹಾಗೂ ಆಕೆಯ ತಾಯಿಯನ್ನು ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಐಪಿಸಿ ಸೆಕ್ಷನ್‌ 300’ ಚಿತ್ರದಲ್ಲಿ ನಟಿಸಿದ್ದ ಪ್ರಿಯಾಂಕಾ ಅಲಿಯಾಸ್‌ ಸವಿತಾ (32) ಹಾಗೂ ಆಕೆಯ ತಾಯಿ ನಾಗಮ್ಮ (55) ಬಂಧಿತರು. ಜ.29ರಂದು ಚನ್ನಪಟ್ಟಣ ತಾಲೂಕಿನ ರಾಂಪುರ ಗ್ರಾಮದಲ್ಲಿ ಕಲ್ಲಿನಿಂದ ತಲೆಯನ್ನು ಜಜ್ಜಿ ರೌಡಿಶೀಟರ್‌ ಸುನೀಲ್‌ ಎಂಬಾತನನ್ನು ಕೊಲೆ ಮಾಡಲಾಗಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು 2 ತಿಂಗಳ ಹಿಂದೆ ಪ್ರಕರಣದ ಪ್ರಮುಖ ಆರೋಪಿಗಳಾದ ಮನು ಹಾಗೂ ಶಿವರಾಜು ಎಂಬುವರನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿರಿಸಿದ್ದರು. ಇವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ತನ್ನ ಮಾವನ ಮಗ, ರೌಡಿಶೀಟರ್‌ ಸುನೀಲ್‌ ಕೊಲೆಗೆ ಪ್ರಿಯಾಂಕಾ ಸುಪಾರಿ ನೀಡಿದ್ದ ಅಂಶ ಬೆಳಕಿಗೆ ಬಂದಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಮುಖ ಆರೋಪಿ ಮನು, ಪ್ರಿಯಾಂಕಾ ಅವರ ಚಿಕ್ಕಮ್ಮನ ಮಗ ಎಂದು ತಿಳಿದು ಬಂದಿದೆ. ಯಜ್ಞ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಸೇರಿದಂತೆ ಕನ್ನಡ ಹಾಗೂ ತೆಲುಗಿನ ಕೆಲ ಚಿತ್ರಗಳಲ್ಲಿ ಪ್ರಿಯಾಂಕಾ ನಟಿಸಿದ್ದರು.