ಅಕ್ರಮವಾಗಿ ಅಕ್ಕಿ ಸಂಗ್ರಹಿಸಿದ್ದ ರೈಸ್ ಮಿಲ್ ಮೇಲೆ ಎಸಿ ಕುಮಾರಸ್ವಾಮಿ ದಾಳಿ ಮಾಡಿದ ಸಂದರ್ಭದಲ್ಲಿ ಅವರ ಮೇಲೆ ಲಾರಿ ಹತ್ತಿಸಿ ಕೊಲೆಗೆ ಯತ್ನಿಸಲಾಗಿದೆ.
ದಾವಣಗೆರೆ (ಏ.08): ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿರುವ ಮಿಲ್ ಮೇಲೆ ದಾಳಿ ನಡೆಸುವ ವೇಳೆ ದಾವಣಗೆರೆ ಸಹಾಯಕ ಆಯುಕ್ತ (ಎಸಿ) ಕೊಲೆ ಯತ್ನ ನಡೆದಿದೆ.
ಅಕ್ರಮವಾಗಿ ಅಕ್ಕಿ ಸಂಗ್ರಹಿಸಿದ್ದ ರೈಸ್ ಮಿಲ್ ಮೇಲೆ ಎಸಿ ಕುಮಾರಸ್ವಾಮಿ ದಾಳಿ ಮಾಡಿದ ಸಂದರ್ಭದಲ್ಲಿ ಅವರ ಮೇಲೆ ಲಾರಿ ಹತ್ತಿಸಿ ಕೊಲೆಗೆ ಯತ್ನಿಸಲಾಗಿದೆ.
ದಾವಣಗೆರೆ ತಾ. ಹಳೇಬಾತಿ ಗ್ರಾಮದ ಬಳಿ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ರೈಸ್ ಮಿಲ್ ಮಾಲೀಕ ಉಮಾಪತಿ ಹಾಗೂ ಮಗ ಪ್ರಶಾಂತ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 250 ಹೆಚ್ಚು ಅಕ್ಕಿ ಮೂಟೆಗಳನ್ನು ಜಪ್ತಿ ಮಾಡಲಾಗಿದೆ.