ರಾಜ್ಯದ 11 ಸಾವಿರ ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ಒಂದು ಸಾವಿರ ಪೌರ ಕಾರ್ಮಿಕರಿಗೆ ವಿದೇಶ ಪ್ರವಾಸ ಭಾಗ್ಯವನ್ನು ರಾಜ್ಯ ಸರ್ಕಾರ ಕರುಣಿಸಿದ್ದು, ಮುಂದಿನ ತಿಂಗಳು ಸಿಂಗಾಪುರಕ್ಕೆ ಪೌರ ಕಾರ್ಮಿಕರು ತೆರಳಲಿದ್ದಾರೆ.

ಬೆಂಗಳೂರು(ಜೂ.25): ರಾಜ್ಯದ 11 ಸಾವಿರ ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ಒಂದು ಸಾವಿರ ಪೌರ ಕಾರ್ಮಿಕರಿಗೆ ವಿದೇಶ ಪ್ರವಾಸ ಭಾಗ್ಯವನ್ನು ರಾಜ್ಯ ಸರ್ಕಾರ ಕರುಣಿಸಿದ್ದು, ಮುಂದಿನ ತಿಂಗಳು ಸಿಂಗಾಪುರಕ್ಕೆ ಪೌರ ಕಾರ್ಮಿಕರು ತೆರಳಲಿದ್ದಾರೆ.

ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಶನಿವಾರ ವಿಧಾನಸೌಧದಲ್ಲಿ ಈ ವಿಷಯ ತಿಳಿಸಿದರು. ಮ್ಯಾನ್‌ಹೋಲ್‌ಗಳನ್ನು ಸುರಕ್ಷಿತವಾಗಿ ಸ್ವಚ್ಛಗೊಳಿಸುವ ಆಧುನಿಕ ತಂತ್ರಜ್ಞಾನದ ಅಧ್ಯಯನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ದ ಒಂದು ಸಾವಿರ ಪೌರ ಕಾರ್ಮಿಕರು ಸಿಂಗಾಪುರಕ್ಕೆ ತೆರಳಲಿದ್ದಾರೆ ಎಂದು ಹೇಳಿದರು.

ಮ್ಯಾನ್‌ಹೋಲ್‌ಗಳನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರು ಅಸುರಕ್ಷತೆಯಿಂದ ಆಗಾಗ ಅಪಾಯಕ್ಕೆ ಸಿಲುಕುತ್ತಾರೆ. ಆದರೆ ನಗರ ಆಡಳಿತದ ವಿಚಾರದಲ್ಲಿ ಸಾಕಷ್ಟುಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ಸಿಂಗಾ ಪುರಕ್ಕೆ ಭೇಟಿ ನೀಡಿ, ಅಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವ ಪ್ರಕ್ರಿಯೆ ಹೇಗೆ ನಡೆಸಲಾಗುತ್ತದೆ ಹಾಗೂ ಯಾವ ಉಪಕರಣಗಳನ್ನು ಬಳಸಿ ಕೈಗೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ನಮ್ಮ ಪೌರ ಕಾರ್ಮಿಕರು ಅಧ್ಯಯನ ಕೈಗೊಳ್ಳಲಿದ್ದಾರೆ.
ಈ ಮೂಲಕ ನಮ್ಮ ರಾಜ್ಯದ ಪೌರ ಕಾರ್ಮಿಕರನ್ನೂ ಆಧುನಿಕ ಯಂತ್ರಗಳ ಬಳಕೆಗೆ ಅಣಿಗೊಳಿಸಲಾ ಗುತ್ತಿದೆ. ಈ ಯೋಜನೆಗೆ ನಿಖರ ವೆಚ್ಚ ನಿಗದಿ ಪಡಿಸಿಲ್ಲವಾದರೂ ಪ್ರವಾಸಕ್ಕೆ ಬೇಕಾಗುವ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಹೇಳಿದರು.