ಲೋಕಸಭಾ ಚುನಾವಣೆ ನಂತರ ಹುಟ್ಟಿಕೊಳ್ಳುತ್ತಿರುವ ಒಂದೆಲ್ಲಾ ಒಂದು ಸುದ್ದಿಗಳು ನಮ್ಮನ್ನು ಒಂದು ಕ್ಷಣ ನಮ್ಮನ್ನು ಹಿಂದಕ್ಕೆ ತಿರುಗುವಂತೆ ಮಾಡುತ್ತವೆ. ಈ ಸಿಹಿತಿಂಡಿಗಳ ಸುದ್ದಿಯೂ ಹಾಗೆ ಇದೆ.
ಮುಂಬೈ[ಮೇ. 21] ಮಹಾರಾಷ್ಟ್ರದಲ್ಲಿ ಮೋದಿ ಅಲೆ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಈ ಸಿಹಿತಿಂಡಿ ತಯಾರಿಕಾ ಅಂಗಡಿಯಲ್ಲಿ ಅಂಗಡಿಯಲ್ಲಿ ಮಾತ್ರ ಎಲ್ಲಿ ನೋಡಿದರೂ ಮೋದಿಯೇ!
ಮುಂಬೈ ದಕ್ಷಿಣ ಕ್ಷೇತ್ರದ ಗೋಪಾಲ್ ಶೆಟ್ಟಿ ಗೆಲುವಿನ ನಗೆ ಬೀರುವ ವಿಶ್ವಾಸದಲ್ಲಿ ಇದ್ದಾರೆ. ಇದೇ ಕಾರಣಕ್ಕೆ 1500 ದಿಂದ 2000 ಕೆಜಿ ಸಿಹಿತಿಂಡಿ ತಯಾರು ಮಾಡಲು ಆರ್ಡರ್ ನೀಡಿದ್ದಾರೆ.
ಗೋಪಾಲ ಶೆಟ್ಟಿ ಆರ್ಡರ್ ನಿಂದ ಸಖತ್ ಖುಷಿಯಾಗಿರುವ ಸಿಬ್ಬಂದಿ ಮೋದಿ ಮಾಸ್ಕ್ ಧರಿಸಿ ಸಿಹಿತಿಂಡಿ ತಯಾರಿಸಿದ್ದಾರೆ. ಬೋರಿವಾಲಿಯ ಈ ಅಂಗಡಿಯಲ್ಲಿ ಎಲ್ಲಿ ನೋಡಿದರೂ ಮೋದಿ..ಮೋದಿ.. ಮೋದಿ..
