ಸಿಂಗಾಪುರ/ನವದೆಹಲಿ[ಮಾ.27]: 263 ಮಂದಿ ಪ್ರಯಾಣಿಕರನ್ನು ಹೊತ್ತು ಮುಂಬೈನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ಸಿಂಗಾಪುರ ಮೂಲದ ವಿಮಾನಕ್ಕೆ ಬಾಂಬ್‌ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿದೆ.

ಈ ಕೂಡಲೇ ಎರಡು ಎಫ್‌-16 ಯುದ್ಧ ವಿಮಾನಗಳನ್ನು ರವಾನಿಸಿದ ಸಿಂಗಾಪುರ ವಾಯುಪಡೆ, ಪ್ರಯಾಣಿಕರ ವಿಮಾನವನ್ನು ಸಿಂಗಾಪುರದ ಚಾಂಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ವಿಮಾನವನ್ನು ತನಿಖೆಗೊಳಪಡಿಸಲಾಗಿದ್ದು, ಹೆಚ್ಚಿನ ವಿವರಣೆ ನೀಡಲು ಅಸಾಧ್ಯ ಎಂದು ಸಿಂಗಾಪುರ ವಿಮಾನಯಾನ ಸಂಸ್ಥೆ ಹೇಳಿದೆ.

ಸೋಮವಾರ ರಾತ್ರಿ 11.35ಕ್ಕೆ ಮುಂಬೈ ವಿಮಾನ ನಿಲ್ದಾಣದಿಂದ ಪ್ರಯಾಣಿಕರನ್ನು ಹೊತ್ತು ಸಿಂಗಾಪುರದತ್ತ ಹೊರಟ ಬೆನ್ನಲ್ಲೇ, ಬಾಂಬ್‌ ಕರೆ ಬಂದಿತ್ತು.